ಸಮಾಜದ ಅಂಚಿನಲ್ಲಿರುವ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಅವಕಾಶ ಒದಗಿಸುವ ಬದ್ಧತೆಯೊಂದಿಗೆ ಟಾಪ್ ರ‍್ಯಾಂಕರ್ಸ್ ಸಂಸ್ಥೆಯ ಲೀಗಲ್‌ಎಡ್ಜ್ ಅಂಗಸಂಸ್ಥೆಯು ಐಡಿಯಾ (ಇನ್‌ಕ್ರೀಸಿಂಗ್ ಡೈವರ್ಸಿಟಿ ಫಾರ್ ಇನ್‌ಕ್ರೀಸಿಂಗ್ ಅಕ್ಸೆಸ್) ಸಂಸ್ಥೆಯೊಂದಿಗೆ ಕೈಜೋಡಿಸಿದೆ.
ಐಡಿಯಾ ಎಂಬುದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್‌ಎಟಿ) ಬರೆಯುವ ಅಭ್ಯರ್ಥಿಗಳಿಗಾಗಿ ಬೋಧನೆ, ಹಣಕಾಸು ನೆರವು ಹಾಗೂ ಮಾರ್ಗದರ್ಶನ ನೀಡುವ ಸರ್ಕಾರೇತರ (ಎನ್‌ಜಿಒ) ಸಂಸ್ಥೆಯಾಗಿದೆ. ಸಮಾಜದ ವಿವಿಧ ಕ್ಷೇತ್ರಗಳಿಗೆ ಸೇರಿದ ಉದಯೋನ್ಮುಖ ಪ್ರತಿಭೆಯ ಮಹತ್ವವನ್ನು ಗುರುತಿಸಿ ಅವರಿಗೆ ಕಾನೂನು ಶಿಕ್ಷಣ ಒದಗಿಸುವ ಸಲುವಾಗಿ ಟಾಪ್ ರ‍್ಯಾಂಕರ್ಸ್ ಲೀಗಲ್‌ಎಡ್ಜ್ 2019ರಿಂದಲೇ ಐಡಿಯಾದೊಂದಿಗೆ ಸಹಭಾಗಿತ್ವ ಹೊಂದಿದೆ.
ಕಳೆದ ಅನೇಕ ವರ್ಷಗಳಲ್ಲಿ ಲೀಗಲ್‌ಎಡ್ಜ್ ಹಲವು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿದ್ದು ಭವಿಷ್ಯದಲ್ಲೂ ಈ ನೆರವು ಮುಂದುವರೆಸಲು ತನ್ನನ್ನು ಸಮರ್ಪಿಸಿಕೊಂಡಿದೆ. ಈ ಬೆಸುಗೆಯ ಪರಿಣಾಮ ಎಂಬಂತೆ ಲೀಗಲ್‌ಎಡ್ಜ್ ಸಿಎಲ್‌ಎಟಿ 2024ನೇ ಸಾಲಿನ ತರಬೇತಿಗಾಗಿ 37 ಐಡಿಯಾ ಸಂಸ್ಥೆಯ ಶಿಕ್ಷಾರ್ಥಿಗಳಿಗೆ ತರಬೇತಿ ನೀಡಲಿದೆ. ಇವರಲ್ಲಿ ಭೋಪಾಲ್, ರಾಯ್‌ಪುರ್, ಗುರುಗ್ರಾಮ್, ದೆಹಲಿ, ಚಂಡೀಗಢ, ಜಮ್ಮು, ಪಾಟ್ನಾ, ದೆಹಲಿ, ಜೈಪುರ ಮತ್ತು ಜೋಧ್‌ಪುರ ಸೇರಿದಂತೆ ನಗರಗಳಲ್ಲಿ ಆಫ್‌ಲೈನ್ ತರಗತಿ ಆಯ್ದುಕೊಂಡ 19 ವಿದ್ಯಾರ್ಥಿಗಳು ಇದ್ದಾರೆ. ಉಳಿದ 18 ವಿದ್ಯಾರ್ಥಿಗಳು ಆನ್‌ಲೈನ್ ಕೋಚಿಂಗ್‌ಗೆ ಆದ್ಯತೆ ನೀಡಿದ್ದಾರೆ.
ಇದಿಷ್ಟೇ ಅಲ್ಲದೆ ಸಾಮಾಜಿಕ- ಆರ್ಥಿಕವಾಗಿ ಹಿಂದುಳಖಿದ ವರ್ಗಗಳ ವಿದ್ಯಾರ್ಥಿಗಳಿಗೆ ಲೀಗಲ್ ಎಡ್ಜ್ ʼಉಡಾನ್ ಇಡ್ಬ್ಲ್ಯೂಎಸ್ʼ, ʼಸೂಪರ್ 30ʼ ರೀತಿಯ ವಿವಿಧ ಯೋಜನೆಗಳನ್ನು ರೂಪಿಸಿದೆ. ಐಡಿಯಾ ಜೊತೆ ಸಹಭಾಗಿತ್ವ ಹೊಂದುತ್ತಿರುವುದಕ್ಕಾಗಿ ಸಂಸ್ಥೆಯ ಸಿಇಒ ಗೌರವ್ ಗೋಯೆಲ್ ಸಂತಸ ವ್ಯಕ್ತಪಡಿಸಿದ್ದಾರೆ.