ದಾವೆ

ಬ್ರೇಕಿಂಗ್: ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳ ಉತ್ತೀರ್ಣ ಅಸಾಧ್ಯ; ಗಡುವು ವಿಸ್ತರಣೆಗೆ ರಾಜ್ಯಗಳು ಯುಜಿಸಿಯನ್ನು ಕೋರಲಿ

ಮಹಾರಾಷ್ಟ್ರ ಸರ್ಕಾರವು ವಿಕೋಪ ನಿರ್ವಹಣಾ ಕಾಯಿದೆಯಡಿ ಪರೀಕ್ಷೆಗಳನ್ನು ರದ್ದುಗೊಳಿಸಲು ತೆಗೆದುಕೊಂಡಿರುವ ನಿರ್ಧಾರ ಊರ್ಜಿತ ಎಂದ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ.

Bar & Bench

ಸೆಪ್ಟೆಂಬರ್ 30ರೊಳಗೆ ಅಂತಿಮ ಪದವಿ ಪರೀಕ್ಷೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಾವಳಿ ಪ್ರಶ್ನಿಸಿದ್ದ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಕಟಿಸಿತು. ತೀರ್ಪಿನ ಮುಖ್ಯಾಂಶಗಳು ಇಂತಿವೆ.

1. 6.7.2020ರಂದು ಹೊರಡಿಸಿದ್ದ ಯುಜಿಸಿಯ ಪರಿಷ್ಕೃತ ಮಾರ್ಗಸೂಚಿ ಮತ್ತು 6.7.2020ರ ಕಚೇರಿಯ ಜ್ಞಾಪಕ ಪತ್ರ ವಜಾಗೊಳಿಸಲು ನಕಾರ.

2. 30.09.2020ರೊಳಗೆ ಅಂತಿಮ ಪರೀಕ್ಷೆಗಳನ್ನು ನಡೆಸಬೇಕೆಂಬ ಯುಜಿಸಿ ಮಾರ್ಗಸೂಚಿಯ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಕೈಗೊಂಡಿರುವ ನಿರ್ಧಾರಗಳು ಮೇಲುಗೈ ಸಾಧಿಸಲಿವೆ

3. ಹಿಂದಿನ ಸೆಮಿಸ್ಟರ್/ಕಳೆದ ವರ್ಷದ ಫಲಿತಾಂಶ ಮತ್ತು ಪಠ್ಯೇತರ ಚಟುವಟುಕೆಗಳನ್ನು ಆಧರಿಸಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ಧಾರವು ಡಿಎಂ ಕಾಯ್ದೆಯ ವ್ಯಾಪ್ತಿ ಮೀರಿದ್ದು, ಯುಜಿಸಿ ಮಾರ್ಗಸೂಚಿಗಳ ಅನ್ವಯಕ್ಕೆ ಅವಕಾಶ ಮಾಡಿಕೊಡಬೇಕು.

4. ಅಂತಿಮ ವರ್ಷ/ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆ ನಡೆಸದೆ ಉತ್ತೀರ್ಣಗೊಳಿಸಲಾಗದು.

5. ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶ ಅಂತಿಮ ವರ್ಷ/ಸೆಮಿಸ್ಟರ್ ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದರೆ ಯುಜಿಸಿಗೆ 30.09.2020ರ ಗಡುವು ವಿಸ್ತರಿಸುವಂತೆ ಕೋರಿ ಅರ್ಜಿ ಬರೆಯಬೇಕು. ಈ ಸಂಬಂಧ ಯುಜಿಸಿ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು.