<div class="paragraphs"><p>Lalu Prasad Yadav</p></div>

Lalu Prasad Yadav

 
ಸುದ್ದಿಗಳು

ಡೋರಂಡಾ ಖಜಾನೆ ಹಗರಣ: ಲಾಲು ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ನೀಡಿದ ರಾಂಚಿ ನ್ಯಾಯಾಲಯ

Bar & Bench

₹139 ಕೋಟಿ ಮೊತ್ತದ ಡೋರಂಡಾ ಖಜಾನೆ ಹಗರಣದಲ್ಲಿ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ದೋಷಿ ಎಂದು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶರಾದ ಸಿ ಕೆ ಶಶಿ ಫೆಬ್ರವರಿ 18 ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದರು.

ಚಾಯ್‌ಬಾಸಾ ಖಜಾನೆಯಿಂದ ₹ 37.7 ಕೋಟಿ ಮತ್ತು ₹ 33.13 ಕೋಟಿ, ದಿಯೋಗಢ್ ಖಜಾನೆಯಿಂದ ₹ 89.27 ಕೋಟಿ ಮತ್ತು ದುಮ್ಕಾ ಖಜಾನೆಯಿಂದ ₹ 3.76 ಕೋಟಿ ಅಕ್ರಮ ಲಾಭ ಪಡೆದ ಇತರ ನಾಲ್ಕು ಮೇವು ಹಗರಣ ಪ್ರಕರಣಗಳಾಗಿದ್ದು ಇವುಗಳಲ್ಲಿ ಲಾಲೂ ಅವರಿಗೆ ಈಗಾಗಲೇ ಶಿಕ್ಷೆ ವಿಧಿಸಲಾಗಿದೆ. 1991 ಮತ್ತು 1996 ರ ನಡುವೆ ಲಾಲೂ ಅವರು ಬಿಹಾರ ಮುಖ್ಯಮಂತ್ರಿಯಾಗಿದ್ದಾಗ ₹ 950 ಕೋಟಿ ಮೊತ್ತದ ಹಗರಣ ನಡೆದಿತ್ತು.

ಮೇವು ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರಿಗೆ ಒಟ್ಟು 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು ಅವರು ಎಲ್ಲಾ ಅಪರಾಧಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಚಾಯ್‌ಬಾಸಾ ಖಜಾನೆ ಹಗರಣಕ್ಕೆ ಸಂಬಂಧಿಸಿದಂತೆ 2020ರ ಅಕ್ಟೋಬರ್‌ನಲ್ಲಿ ಮತ್ತು ದಿಯೋಗಢ್‌ ಖಜಾನೆ ಹಗರಣಕ್ಕೆ ಸಂಬಂಧಿಸಿದಂತೆ 2020ರ ಫೆಬ್ರವರಿಯಲ್ಲಿ ಹಾಗೂ ತೀರಾ ಇತ್ತೀಚೆಗೆ ದುಮ್ಕಾ ಖಜಾನೆ ಪ್ರಕರಣದಲ್ಲಿ ಅವರಿಗೆ ಜಾಮೀನು ಲಭಿಸಿದೆ.