Delhi High Court, ED and a plane  
ಸುದ್ದಿಗಳು

[ಲುಕೌಟ್ ಸುತ್ತೋಲೆ] ಸಂಜ್ಞೇಯ ಅಪರಾಧ ಕೃತ್ಯ ಎಸಗದವರ ವಿದೇಶ ಪ್ರವಾಸ ತಡೆಯುವಂತಿಲ್ಲ: ದೆಹಲಿ ಹೈಕೋರ್ಟ್

ಎಲ್ಒಸಿ ಮಾಹಿತಿ ಎಂಬುದು ವ್ಯಕ್ತಿಯ ನಿರ್ಗಮನ ಅಥವಾ ಆಗಮನದ ಬಗ್ಗೆ ತನಿಖಾಧಿಕಾರಿ ತಿಳಿದುಕೊಳ್ಳುವುದಕ್ಕೆ ಇರುವುದಾಗಿದೆ ಎಂದು ನ್ಯಾ. ಮುಕ್ತಾ ಗುಪ್ತಾ ತಿಳಿಸಿದರು.

Bar & Bench

ಸಂಜ್ಞೇಯ ಅಪರಾಧ ಎದುರಿಸದ ವ್ಯಕ್ತಿಗಳ ವಿದೇಶ ಪ್ರವಾಸ ತಡೆಯಲು ಅಧಿಕಾರಿಗಳು ಲುಕೌಟ್‌ ಸುತ್ತೋಲೆ (ಎಲ್‌ಒಸಿ) ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಧ್ರುವ ತಿವಾರಿ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ವ್ಯಕ್ತಿಯ ನಿರ್ಗಮನ ಅಥವಾ ಆಗಮನದ ವಿವರಗಳ ಬಗ್ಗೆ ತನಿಖಾ ಸಂಸ್ಥೆ ನಿರಂತರವಾಗಿ ಗಮನಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಲುಕೌಟ್‌ ಸುತ್ತೋಲೆಯ ಮಾಹಿತಿ ಇದೆ ಎಂದು ನ್ಯಾ ಮುಕ್ತಾ ಗುಪ್ತಾ ಹೇಳಿದರು.

“ನಾಗರಿಕನೊಬ್ಬ ಕೃತ್ಯದಲ್ಲಿ ಭಾಗಿಯಾಗಿದ್ದಾನೆಂಬ ಶಂಕೆ ಇರದಿದ್ದಾಗ ಅಥವಾ ಐಪಿಸಿ ಇಲ್ಲವೇ ಇನ್ನಿತರ ಕಾನೂನುಗಳಡಿ ಸಂಜ್ಞೇಯ ಅಪರಾಧದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಅಥವಾ ವಿಚಾರಣೆ ಎದುರಿಸದಿದ್ದರೆ ಆ ನಾಗರಿಕನನ್ನು ಬಂಧಿಸುವಂತೆಯೂ ಇಲ್ಲ ದೇಶ ತೊರೆಯುವುದನ್ನು ತಡೆಯುವಂತೆಯೂ ಇಲ್ಲ. ಮೂಲ ಮಾಹಿತಿ ಕೋರಿದ ಸಂಸ್ಥೆ ವ್ಯಕ್ತಿಯ ಆಗಮನ ಅಥವಾ ನಿರ್ಗಮನದ ಬಗ್ಗೆ ಮಾತ್ರವೇ ಮಾಹಿತಿ ಪಡೆಯಬಹುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಗೆ ನೀಡಿರುವ ಲುಕೌಟ್‌ ಸುತ್ತೋಲೆಯನ್ನು ಹಿಂಪಡೆಯಲು ನಿರ್ದೇಶನ ನೀಡುವಂತೆ ಕೋರಿ ಅರ್ಜಿದಾರ ಧ್ರುವ ತಿವಾರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆದೇಶದ ವೇಳೆ ನ್ಯಾಯಾಲಯ ಮೇಲಿನ ಅಂಶಗಳನ್ನು ಹೇಳಿತು.