ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನು ಕೇರಳ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ.
ನ್ಯಾಯಮೂರ್ತಿ ಶಿವರಾಮನ್ ಅವರು ಅಕ್ಟೋಬರ್ 16, 2023ರಂದು ಕೇರಳ ರಾಜ್ಯದಿಂದ ವರ್ಗಾವಣೆಯನ್ನು ಕೋರಿದ್ದರು. ಸುಪ್ರೀಂ ಕೋರ್ಟ್ ಕೊಲಿಜಿಯಂ ಕಳೆದ ತಿಂಗಳು ಅವರ ಮನವಿಯನ್ನು ಸ್ವೀಕರಿಸಿ ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲು ಶಿಫಾರಸ್ಸು ಮಾಡಿತ್ತು.
ನ್ಯಾಯಮೂರ್ತಿ ಶಿವರಾಮನ್ ಅವರು ಮಾರ್ಚ್ 3, 1991ರಂದು ವಕೀಲರಾಗಿ ನೋಂದಾಯಿಸಿಕೊಂಡಿದ್ದು, 2001ರಿಂದ 2010ರವರೆಗೆ ಕೊಚ್ಚಿನ್ ನಿಗಮದ ಸ್ಥಾಯಿ ಸಲಹೆಗಾರರಾಗಿ ಮತ್ತು ನಂತರ ಜನವರಿ 2007ರಿಂದ ಹಿರಿಯ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದರು. ಹೆಚ್ಚುವರಿಯಾಗಿ, ಅವರು 2010-2011ರ ಅವಧಿಯಲ್ಲಿ ವಿಶೇಷ ಸರ್ಕಾರಿ ವಕೀಲರ (ಸಹಕಾರ) ಹುದ್ದೆ ಹೊಂದಿದ್ದರು. ಏಪ್ರಿಲ್ 10, 2015 ರಂದು ಕೇರಳ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅವರು ಏಪ್ರಿಲ್ 4, 2017ರಂದು ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.
[ಅಧಿಸೂಚನೆ ಓದಿ]