ಕೆ ಅಣ್ಣಾಮಲೈ, ಮದ್ರಾಸ್ ಹೈಕೋರ್ಟ್
ಕೆ ಅಣ್ಣಾಮಲೈ, ಮದ್ರಾಸ್ ಹೈಕೋರ್ಟ್ ಕೆ ಅಣ್ಣಾಮಲೈ (ಫೇಸ್ಬುಕ್)
ಸುದ್ದಿಗಳು

ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಮದ್ರಾಸ್ ಹೈಕೋರ್ಟ್ ತಡೆ

Bar & Bench

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ವಿರುದ್ಧ ವ್ಯಕ್ತಿಯೊಬ್ಬರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ಎಲ್ಲ ಪ್ರಕ್ರಿಯೆಗಳಿಗೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿದೆ.

ಮುಂದಿನ ಆದೇಶದವರೆಗೆ ವಿಚಾರಣೆಯನ್ನು ತಡೆಹಿಡಿದರುವ ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರು, ಪಿಯೂಷ್ ಈ ವಿಷಯದಲ್ಲಿ ತಮ್ಮ ದಾವೆ ಹೂಡುವ ಹಕ್ಕನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ನವೆಂಬರ್ 29 ರಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ, ದೂರಿನಲ್ಲಿ ಯಾವುದೇ ಬಲವಾದ ಪುರಾವೆಗಳಿಲ್ಲದಿದ್ದರೂ, ವಿಚಾರಣಾಧೀನ ನ್ಯಾಯಾಲಯವು ಅಣ್ಣಾಮಲೈಗೆ ಸಮನ್ಸ್ ಜಾರಿ ಮಾಡಿದೆ ಎಂದು ಹೈಕೋರ್ಟ್ ಹೇಳಿದೆ.

"ಪ್ರಕರಣದಲ್ಲಿ ದೂರುದಾರರು ದಾವೆ ಹೂಡುವ ಹಕ್ಕು ಕಾಣದೆ ಇರುವುದರಿಂದ ದೂರನ್ನು ರದ್ದುಪಡಿಸಲು ಮೇಲ್ನೋಟಕ್ಕೆ ಕಾರಣ ಕಂಡುಬಂದಿದ್ದು ಈ ಹಿನ್ನೆ ಲೆಯಲ್ಲಿ ಮುಂದಿನ ಪ್ರಕ್ರಿಯೆಗೆ ತಡೆ ವಿಧಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಅಣ್ಣಾಮಲೈ ಅವರು ಸಾರ್ವಜನಿಕವಾಗಿ ಬೆದರಿಕೆ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆಕ್ಷೇಪಿಸಿ ನವೆಂಬರ್ 28ರಂದು ಸಾಮಾಜಿಕ ಕಾರ್ಯಕರ್ತ ಪಿಯೂಷ್ ಸೇಲಂ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಣ್ಣಾಮಲೈ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಖಾಸಗಿ ದೂರು ದಾಖಲಿಸಿದ್ದರು.

[ಆದೇಶ ಓದಿ]

K Annamalai v V Piyush.pdf
Preview