Police
Police 
ಸುದ್ದಿಗಳು

ಸಿಸಿಬಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸದೆಯೇ ನ್ಯಾಯಾಧೀಶರು ಅದರ ಆರೋಪ ಪಟ್ಟಿ ಪರಿಗಣಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್

Bar & Bench

ರಾಜ್ಯ ಸರ್ಕಾರ ಸಿಸಿಬಿಯನ್ನು (ಕೇಂದ್ರ ಅಪರಾಧ ವಿಭಾಗ) ಪೊಲೀಸ್‌ ಠಾಣೆ ಎಂದು ಘೋಷಿಸದ ವಿನಾ ಅದು ಸಲ್ಲಿಸಿದ ಆರೋಪಟ್ಟಿಯನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಪರಿಗಣಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಅಂತಹ ಘೋಷಣೆ ಮಾಡದಿದ್ದಲ್ಲಿ, ಸಿಸಿಬಿ ಅಧಿಕಾರಿಯನ್ನು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಪ್ರಭಾರ ಅಧಿಕಾರಿ (Officer in-charge) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬಿ ಎ ಪಾಟೀಲ್ ಅವರಿದ್ದ ಪೀಠ ತೀರ್ಪು ನೀಡಿತು.

"ಸಿಸಿಬಿಯನ್ನು ಪೊಲೀಸ್ ಠಾಣೆ ಎಂದು ಘೋಷಿಸಲು ಸರ್ಕಾರ ಅಂತಹ ಯಾವುದೇ ಒಪ್ಪಿಗೆ ನೀಡಿಲ್ಲ ಎಂದು ಪ್ರತಿವಾದಿಗಳು ತಕ್ಕಮಟ್ಟಿಗೆ ಒಪ್ಪಿಕೊಂಡಿದ್ದಾರೆ. ಸಂಹಿತೆಯ ಸೆಕ್ಷನ್ 2 (ಎಸ್) ಪ್ರಕಾರ ರಾಜ್ಯ ಸರ್ಕಾರ ಸಾಮಾನ್ಯವಾಗಿ ಅಥವಾ ವಿಶೇಷವಾಗಿ ಯಾವುದೇ ಹುದ್ದೆ ಅಥವಾ ಸ್ಥಳವನ್ನು ಪೊಲೀಸ್ ಠಾಣೆ ಎಂದು ಘೋಷಿಸಬೇಕಾಗುತ್ತದೆ. ಆದರೆ ಈ ನ್ಯಾಯಾಲಯದ ಮುಂದೆ ಅಂತಹ ಯಾವುದೇ ಘೋಷಣೆ ವ್ಯಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ, ಸಿಸಿಬಿಯಿಂದ ತನಿಖೆ ನಡೆದಿದೆ ಮತ್ತು ಅವರು (ಸಿಸಿಬಿ ಅಧಿಕಾರಿ) ಸಂಹಿತೆಯ ಸೆಕ್ಷನ್ 173 ರ ಪ್ರಕಾರ ವರದಿಯನ್ನು ಸಲ್ಲಿಸಿದ್ದಾರೆ. ಮೇಲೆ ನಾನು ಮಾಡಿದ ಚರ್ಚೆಯ ದೃಷ್ಟಿಯಿಂದ, ಅವರನ್ನು ಪ್ರಭಾರ ಅಧಿಕಾರಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯವು ಸಿಸಿಬಿ ಸಲ್ಲಿಸಿದ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು" ಎಂದು ಪೀಠ ಹೇಳಿದೆ.

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್) ಪ್ರಾಂಶುಪಾಲ ಮತ್ತು ಡೀನ್ ಡಾ. ಎಂ ಜಿ ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ ಎಂ ಎಸ್ ಅಪ್ಪಾಜಿ ಗೌಡ ಹಾಗೂ ಕಿಮ್ಸ್ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ನಿಸರ್ಗ ಅವರು ಸಲ್ಲಿಸಿದ ಎರಡು ಅರ್ಜಿಗಳ ವಿಚಾರಣೆ ನಡೆಸಿ ಹೈಕೋರ್ಟ್‌ ಈ ತೀರ್ಪು ನೀಡಿದೆ.

ಈ ಹಿಂದೆ ಸಿಸಿಬಿ ಸಲ್ಲಿಸಿದ್ದ ಅಂತಿಮ ವರದಿಯನ್ನು ಪರಿಗಣನೆಗೆ ತೆಗೆದುಕೊಂಡ ಮ್ಯಾಜಿಸ್ಟ್ರೇಟ್‌ ಅವರು ಅರ್ಜಿಯನ್ನು ವಜಾಗೊಳಿಸಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಿದ್ದರು.

ಪ್ರಕರಣದ ಹಿನ್ನೆಲೆ

ರಾಜ್ಯ ಒಕ್ಕಲಿಗರ ಸಂಘ ನಡೆಸುತ್ತಿರುವ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಕಿಮ್ಸ್ ಕೂಡ ಒಂದು. ಗೋಪಾಲ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು, ರೂ. 30 ಲಕ್ಷ. ಪಡೆದು ಆರು ವೈದ್ಯಕೀಯ ವಿದ್ಯಾರ್ಥಿಗಳಿಗೆ 2014-15ನೇ ಸಾಲಿನ ಶೈಕ್ಷಣಿಕ ಕೋರ್ಸ್‌ಗೆ ಪ್ರವೇಶ ಕಲ್ಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ತರುವಾಯ, ತನ್ನ ಮಗನನ್ನು ಪ್ರಥಮ ವರ್ಷದ ಎಂಬಿಬಿಎಸ್ ಕೋರ್ಸ್‌ಗೆ ಸೇರಿಸಲು ದೂರುದಾರರು ರೂ 17 ಲಕ್ಷ ಪಾವತಿಸಿದ್ದರು. ಎರಡನೇ ಆರೋಪಿಯಾದ ಒಕ್ಕಲಿಗರ ಸಂಘದ ನಿರ್ದೇಶಕರ ಶಿಫಾರಸು ಎಂದು ಒಂದು ಉಲ್ಲೇಖ ಪತ್ರ ನೀಡಲಾಯಿತು. . 2014 ರ ಆಗಸ್ಟ್‌ನಲ್ಲಿ 3,72,000 ರೂ.ಗಳನ್ನು ದೂರುದಾರರಿಂದ ಪಡೆಯಲಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ದೂರುದಾರನ ಮಗನಿಗೆ ಪ್ರವೇಶ ನೀಡುವ ಬದಲು ಮತ್ತೊಬ್ಬ ಆರೋಪಿಯ ಸೊಸೆಗೆ ಪ್ರವೇಶ ಕಲ್ಪಿಸಲು ಅಧಿಕಾರಿಗಳು ಮುಂದಾದರು. ಈ ಕಾರಣಕ್ಕೆ ನಂಬಿಕೆ ದ್ರೋಹ ಮತ್ತು ವಂಚನೆಗೊಳಗಾಗಿರುವುದಾಗಿ ಆರೋಪಿಸಿ ಡೀನ್‌ ಹಾಗೂ ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಂತರ, ದೂರುದಾರನ ಮಗನಿಗೆ ಪ್ರವೇಶ ನೀಡುವ ಬದಲು, ಅಧಿಕಾರಿಗಳು ಇನ್ನೊಬ್ಬ ಆರೋಪಿಗಳ ಸೊಸೆಯನ್ನು ಒಪ್ಪಿಕೊಂಡರು. ಈ ಕಾರಣದಿಂದಾಗಿ, ಡೀನ್ ಮತ್ತು ಇತರ ಇಬ್ಬರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಏಕೆಂದರೆ ಅವರು ನಂಬಿಕೆ ಉಲ್ಲಂಘನೆ ಮತ್ತು ಮೋಸದ ಅಪರಾಧಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಯಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406, 477, 420, 120 ಬಿ, 114 ಆರ್ / ಡಬ್ಲ್ಯೂ ಸೆಕ್ಷನ್ 34 ರ ಅಡಿಯಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೇಶಿಸಿತ್ತು.

ಗೌಡ ಮತ್ತು ನಿಸರ್ಗ ಅವರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್‌ ವಾದ ಮಂಡಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿ ಎಂ ಶೀಲವಂತ್‌ ಸರ್ಕಾರದ ನಿಲುವುಗಳನ್ನು ನ್ಯಾಯಾಲಯಕ್ಕೆ ತಿಳಿಸಿದ್ದರು.

ತೀರ್ಪನ್ನು ಇಲ್ಲಿ ಓದಿ:

MG_Gopal_vc_CCB.pdf
Preview