<div class="paragraphs"><p>Uddhav Thackeray and Governor Bhagat Singh Koshyari with Bombay HC background&nbsp;</p></div>

Uddhav Thackeray and Governor Bhagat Singh Koshyari with Bombay HC background 

 
A1
ಸುದ್ದಿಗಳು

ಮಹಾರಾಷ್ಟ್ರ ಸಿಎಂ ಮತ್ತು ರಾಜ್ಯಪಾಲರ ನಡುವೆ ಸಹಮತವಿಲ್ಲ ಎಂದ ಬಾಂಬೆ ಹೈಕೋರ್ಟ್ [ಚುಟುಕು]

Bar & Bench

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಮತ್ತು ಉಪಸಭಾಧ್ಯಕ್ಷರ ಆಯ್ಕೆಯ ನಿಯಮಗಳನ್ನುಪ್ರಶ್ನಿಸಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಗಿರೀಶ್ ಮಹಾಜನ್ ಮತ್ತು ನಾಗರಿಕ ಜನಕ್ ವ್ಯಾಸ್ ಎಂಬ ಸಂಸ್ಥೆ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

"ದುರದೃಷ್ಟಕರ ಅಂಶವೆಂದರೆ ಇಬ್ಬರು ಅತ್ಯುನ್ನತ ಹುದ್ದೆಯಲ್ಲಿರುವವರಿಗೆ (ರಾಜ್ಯಪಾಲರು ಮತ್ತು ಮುಖ್ಯಮಂತ್ರಿ) ಪರಸ್ಪರ ನಂಬಿಕೆ ಇಲ್ಲ. ದಯವಿಟ್ಟು ನೀವಿಬ್ಬರೂ ಒಟ್ಟಿಗೆ ಕುಳಿತು ಇದನ್ನು ನಿಮ್ಮ ನಡುವೆ ಬಗೆಹರಿಸಿಕೊಳ್ಳಿ. ಈ ಎಲ್ಲಾ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಿ. ನಿಮ್ಮ ರಂಪಾಟ ರಾಜ್ಯವನ್ನು ಮುಂದಕ್ಕೆ ಕೊಂಡೊಯ್ಯುವುದಿಲ್ಲ. ಯಾವಾಗಲೂ ನಾಣ್ಯಕ್ಕೆ ಇನ್ನೊಂದು ಮುಖ ಇರುತ್ತದೆ. ನಾವೆಲ್ಲರೂ ಓದುತ್ತಿದ್ದೇವೆ. ರಾಜ್ಯಪಾಲರು ಮತ್ತು ಸಿಎಂ ನಡುವೆ ಸಹಮತವಿಲ್ಲ. ಆದರೆ, ಇದರಿಂದ ನೋವನುಭವಿಸುವವರು ಯಾರು?" ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾ. ಎಂ ಎಸ್‌ ಕಾರ್ಣಿಕ್‌ ಅವರಿದ್ದ ಪೀಠ ಪ್ರಶ್ನಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.