Senior Citizens
Senior Citizens vecteezy.com
ಸುದ್ದಿಗಳು

ಗಳಿಕೆಯಿಂದ ಹಿರಿಯ ನಾಗರಿಕರು ವಂಚಿತರಾಗದಂತೆ ಆದೇಶ ನೀಡುವ ಅಧಿಕಾರ ಜೀವನಾಂಶ ನ್ಯಾಯಮಂಡಳಿಗಳಿಗೆ ಇದೆ: ಕೇರಳ ಹೈಕೋರ್ಟ್

Bar & Bench

ತಮ್ಮ ಗಳಿಕೆಯಿಂದ ಹಿರಿಯ ನಾಗರಿಕರು ವಂಚಿತರಾಗದಂತೆ ಅವರ ಮಕ್ಕಳು ಅಥವಾ ಸಂಬಂಧಿಕರಿಗೆ ನಿರ್ದೇಶನ ನೀಡುವ ಅಧಿಕಾರ ಜೀವನಾಂಶ ನ್ಯಾಯಮಂಡಳಿಗಳಿಗೆ ಇದೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. [ಲೀಲಮ್ಮ ಈಪೆನ್ ಮತ್ತು ಕೊಟ್ಟಾಯಂ ಜಿಲ್ಲಾ ದಂಡಾಧಿಕಾರಿ ನಡುವಣ ಪ್ರಕರಣ ].

ಇಂತಹ ನ್ಯಾಯಮಂಡಳಿಗಳ ಅಧಿಕಾರ ಕೇವಲ ಮಾಸಿಕ ಭತ್ಯೆಗೆ ಆದೇಶ ನೀಡುವುದಕ್ಕೆ ಸೀಮಿತವಾಗಿಲ್ಲ, ಬದಲಿಗೆ ಹಿರಿಯ ನಾಗರಿಕರು ತಮ್ಮ ಸ್ವಂತ ಗಳಿಕೆಯಿಂದ ಗೌರವಾನ್ವಿತ ಜೀವನ ನಡೆಸುವಂತೆ ನೋಡಿಕೊಳ್ಳಬೇಕಿದೆ ಎಂದು ನ್ಯಾ. ಮುರಳಿ ಪುರುಷೋತ್ತಮನ್ ತಿಳಿಸಿದರು.

ಹಿರಿಯ ನಾಗರಿಕರು ಗೌರವಯುತ ಜೀವನ ನಡೆಸಲು, ತಮ್ಮ ಸ್ವಂತ ಗಳಿಕೆಯ ಮೂಲಕ ತಾವೇ ಸುರಕ್ಷಿತವಾಗಿರಲು ಅಡ್ಡಿಯಾಗದಂತೆ ನೋಡಿಕೊಳ್ಳಲು ನ್ಯಾಯಮಂಡಳಿಗೆ ಆದೇಶ ನೀಡುವ ಅಧಿಕಾರವಿದೆ ಎಂದು ಪೀಠ ಹೇಳಿದೆ.

ತಮ್ಮ ಪತಿ ಬರೆದಿಟ್ಟ ಉಯಿಲನ್ನು ಜಾರಿಗೊಳಿಸುವಂತೆ ಕೋರಿ ಲೀಲಮ್ಮ ಈಪೆನ್‌ ಎಂಬ ಅರ್ಜಿದಾರೆ ಸಲ್ಲಿಸಿದ್ದ ಮನವಿ ಇದಾಗಿದೆ. ಉಯಿಲಿನ ಪ್ರಕಾರ ಪತ್ನಿಯ ಜೀವಿತಾವಧಿಯಲ್ಲಿ ದೊರೆಯುವ ಎಲ್ಲಾ ಆದಾಯವನ್ನು ಆಕೆ ಪಡೆಯುವ ಮತ್ತು ಮನೆಯಲ್ಲಿ ವಾಸಿಸುವ ಹಾಗೂ ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಕೆಲ ಆಸ್ತಿಗಳನ್ನು ಅನುಭವಿಸುವ ಹಕ್ಕನ್ನು ಅರ್ಜಿದಾರೆಗೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ “ಜೀವನಾಂಶ ನ್ಯಾಯಮಂಡಳಿಯ ಅಥವಾ ತಾನು ನೀಡಿದ ಆದೇಶವನ್ನು 3 ತಿಂಗಳೊಳಗಾಗಿ ಪಾಲಿಸಬೇಕು. ಹೈಕೋರ್ಟ್ ಮಧ್ಯಸ್ಥಿಕೆ ಕೇಂದ್ರದಲ್ಲಿ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದರೂ, ಅರ್ಜಿದಾರರು ಮತ್ತು ಪ್ರತಿವಾದಿಗಳು ಸೌಹಾರ್ದಯುತ ಇತ್ಯರ್ಥಕ್ಕೆ ಬರಲು ಪ್ರಯತ್ನಿಸಬೇಕು ಎಂದು ನ್ಯಾಯಾಲಯ ಜಿಲ್ಲಾಧಿಕಾರಿಗಳಿಗೆ ಸೂಚಿಸಿತು.