Mahatma Gandhi 
ಸುದ್ದಿಗಳು

ಹುತಾತ್ಮರ ದಿನ: ಮಹಾತ್ಮ ಗಾಂಧಿ ಹತ್ಯೆ ಆರೋಪಿಗಳಿಗೆ 1949ರಲ್ಲಿ ಶಿಕ್ಷೆ ವಿಧಿಸಿದ ತೀರ್ಪಿನ ಪ್ರತಿಗಳನ್ನು ಇಲ್ಲಿ ಓದಿ

ನ್ಯಾಯಾಧೀಶ ಆತ್ಮಚರಣ್ ಅವರು ಫೆಬ್ರವರಿ 10, 1949ರಂದು ಗಾಂಧಿ ಹತ್ಯೆ ಪ್ರಕರಣದಲ್ಲಿ ನಾಥೂರಾಮ್ ಗೋಡ್ಸೆ ಮತ್ತಿತರ ಆರು ಮಂದಿ ದೋಷಿಗಳು ಎಂದು ತೀರ್ಪು ನೀಡಿದರು. ಆ ಏಳು ಮಂದಿಯಲ್ಲಿ ಐವರ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿಯಿತು.

Bar & Bench

ಮಹಾತ್ಮ ಗಾಂಧಿ ಎಂದೇ ಅಜರಾಮರರಾದ ಮೋಹನ್‌ದಾಸ್ ಕರಮಚಂದ್ ಗಾಂಧಿ ಅವರು ಕೋಮು ವಿಭಜಕ ಶಕ್ತಿಗಳ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾಗಿ ಇಂದಿಗೆ 75 ವರ್ಷಗಳು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ವಹಿಸಿದ ನಿರ್ಣಾಯಕ ಪಾತ್ರಕ್ಕಾಗಿ ಅವರು ರಾಷ್ಟ್ರಪಿತ ಎಂದೇ ಪೂಜಿತರಾಗುತ್ತಿದ್ದಾರೆ.

ಗಾಂಧೀಜಿ ಅವರನ್ನು ಜನವರಿ 30, 1948ರಂದು ಗುಂಡಿಕ್ಕಿ ಕೊಲ್ಲಲಾಯಿತು. ಫೆಬ್ರವರಿ 10, 1949ರಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆತ್ಮಚರಣ್ ಅವರು ಗಾಂಧಿ ಹತ್ಯೆ ಪ್ರಕರಣದಲ್ಲಿ ನಾಥೂರಾಮ್ ಗೋಡ್ಸೆ ಹಾಗೂ ಇತರ ಆರು ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿದರು.

ಇದರ ವಿರುದ್ಧ ಶಿಮ್ಲಾದ ಪೂರ್ವ ಪಂಜಾಬ್‌ ಹೈಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭಂಡಾರಿ, ಅಚ್ರು ರಾಮ್ ಹಾಗೂ ಖೋಸ್ಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಾಥೂರಾಮ್ ಗೋಡ್ಸೆ ಮತ್ತಿತರ ನಾಲ್ವರ ಅಪರಾಧವನ್ನು ದೃಢಪಡಿಸಿತು. ಇಬ್ಬರು ಆರೋಪಿಗಳನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಯಿತು. ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ಗಳು ನೀಡಿದ ತೀರ್ಪಿನ ಪ್ರತಿಗಳು ಆಸಕ್ತರ ಓದಿಗಾಗಿ ಇಲ್ಲಿ ಲಭ್ಯವಿವೆ:

ಪೂರ್ವ ಪಂಜಾಬ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಇಲ್ಲಿ ಓದಿ:

Godse___HC___Judgmentt.pdf
Preview

ವಿಚಾರಣಾ ನ್ಯಾಯಾಲಯದ ತೀರ್ಪನ್ನು ಇಲ್ಲಿ ಓದಿ:

Godse___TC___Judgmentt.pdf
Preview