Justice CT Ravikumar, Justice MR Shah, Justice Sanjay karol
Justice CT Ravikumar, Justice MR Shah, Justice Sanjay karol 
ಸುದ್ದಿಗಳು

ಕಾನೂನುಬಾಹಿರ ಸಂಸ್ಥೆಯ ಸದಸ್ಯತ್ವ ಹೊಂದಿದ್ದರೂ ಯುಎಪಿಎ ಅಡಿ ಅಪರಾಧ: ಸೆಕ್ಷನ್‌ 10(ಎ)(ಐ) ಎತ್ತಿಹಿಡಿದ ಸುಪ್ರೀಂ

Bar & Bench

ಕೇಂದ್ರ ಸರ್ಕಾರವು ಕಾನೂನುಬಾಹಿರ ಎಂದು ಘೋಷಿಸಿರುವ ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿದ್ದರು ಸಾಕು ಅದು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಅಪರಾಧವಾಗುತ್ತದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದೆ.

ಯುಎಪಿಎ ಕಾಯಿದೆ ಸೆಕ್ಷನ್‌ 10(ಎ)(ಐ) ಸಿಂಧುತ್ವವನ್ನು ನ್ಯಾಯಮೂರ್ತಿಗಳಾದ ಎಂ ಆರ್‌ ಶಾ, ಸಿ ಟಿ ರವಿಕುಮಾರ್‌ ಮತ್ತು ಸಂಜಯ್‌ ಕರೋಲ್‌ ಅವರ ನೇತೃತ್ವದ ತ್ರಿಸದಸ್ಯ ಪೀಠವು ಎತ್ತಿ ಹಿಡಿದಿದೆ. ಈ ಹಿಂದೆ 2011ರಲ್ಲಿ ವಿಭಾಗೀಯ ಪೀಠವು ಈ ಸೆಕ್ಷನ್‌ಅನ್ನು ರದ್ದುಗೊಳಿಸಿತ್ತು.

“ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದು ಯುಎಪಿಎ ಗುರಿಯಾಗಿದೆ. ಯುಎಪಿಎ ಅಡಿ ಕಾನೂನುಬಾಹಿರ ಸಂಘಟನೆಯ ಸದಸ್ಯರನ್ನು ಶಿಕ್ಷಿಸಲು ನಿಬಂಧನೆ ಇದೆ. ಹೀಗಾಗಿ, ಸಂವಿಧಾನದ 19(1)(ಎ) ಮತ್ತು 19(2)ಗೆ ಅನುಗುಣವಾಗಿ ಯುಎಪಿಎ ಉದ್ದೇಶಕ್ಕೆ ಅನುಗುಣವಾಗಿ ಸೆಕ್ಷನ್‌ 10(ಎ)(ಐ) ಇದೆ” ಎಂದು ಪೀಠವು ಹೇಳಿದೆ.

“ಸರ್ಕಾರವನ್ನು ಆಲಿಸದಿದ್ದರೆ (ಈ ಪ್ರಕರಣದಲ್ಲಿ 10 (ಎ)(ಐ) ರದ್ದತಿ ವಿಚಾರದಲ್ಲಿ) ಅವರಿಗೆ ದೊಡ್ಡ ಸಮಸ್ಯೆಯಾಗಲಿದೆ.. ಉದ್ದೇಶ ಅರ್ಥ ಮಾಡಿಕೊಳ್ಳಲು ಕೇಂದ್ರ ಸರ್ಕಾರವು 10(1)(ಐ) ಅನ್ನು ಸಮರ್ಥಿಸಲು ವಾದಿಸಬೇಕಿತ್ತು. ಯುಎಪಿಎ ಸೆಕ್ಷನ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸದಿದ್ದಾಗ ಸೆಕ್ಷನ್‌ 10(ಎ)(ಐ) ಅನ್ನು ನ್ಯಾಯಾಲಯವು ರದ್ದುಪಡಿಸಬಾರದಿತ್ತು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಅರೂಪ್‌ ಭುಯಾನ್‌ ಮತ್ತು ರನೀಫ್‌ ಪ್ರಕರಣದಲ್ಲಿ ಭಾರತದ ಪ್ರಕರಣ ಮತ್ತು ವಿಭಿನ್ನತೆಯನ್ನು ಆಧರಿಸದೇ ಈ ನ್ಯಾಯಾಲಯವು ಅಮೆರಿಕಾದ ಪ್ರಕರಣಗಳನ್ನು ಉಲ್ಲೇಖಿಸಿದೆ… ಈ ನ್ಯಾಯಾಲಯವು ಅಮೆರಿಕಾದ ತೀರ್ಪುಗಳನ್ನು ಪಾಲಿಸಿರುವುದರಿಂದ ಅದನ್ನು ಒಪ್ಪಲಾಗದು. ಅಮೆರಿಕಾದ ತೀರ್ಪುಗಳು ನಮಗೆ ದಾರಿ ತೋರುವುದಿಲ್ಲ ಎಂದು ನಾವು ಒಂದು ಕ್ಷಣಕ್ಕೂ ಹೇಳುವುದಿಲ್ಲ… ಆದರೆ ಈ ಎರಡು ದೇಶಗಳ ನಡುವಿನ ಕಾನೂನಿನ ಸ್ವರೂಪದಲ್ಲಿನ ವ್ಯತ್ಯಾಸವನ್ನು ಭಾರತೀಯ ನ್ಯಾಯಾಲಯಗಳು ಪರಿಗಣಿಸಬೇಕಾಗುತ್ತದೆ” ಎಂದು ಪೀಠವು ಹೇಳಿದೆ.

2011ರಲ್ಲಿ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಾಟ್ಜು ಮತ್ತು ಗ್ಯಾನ್‌ ಸುಧಾ ಮಿಶ್ರಾ ಅವರ ನೇತೃತ್ವದ ವಿಭಾಗೀಯ ಪೀಠವು ಅರುಪ್‌ ಭುಯಾನ್‌ ಅವರನ್ನು ಖುಲಾಸೆಗೊಳಿಸಿತ್ತು. ಬಳಿಕ ಟಾಡಾ ಕಾಯಿದೆ ಅಡಿಯಲ್ಲಿ ಬಂಧಿತನಾಗಿದ್ದ ಇಂದ್ರ ದಾಸ್‌ರನ್ನು ಖುಲಾಸೆಗೊಳಿಸಲಾಗಿತ್ತು.