Ex gratia payment, covid death 
ಸುದ್ದಿಗಳು

ಕೋವಿಡ್ ಸಾವುಗಳಿಗೆ ಕೃಪಾನುದಾನ ನೀಡಿದರೆ ವಿಪತ್ತು ಪರಿಹಾರ ನಿಧಿಯ ಮೊತ್ತ ಖಾಲಿಯಾಗುತ್ತದೆ: ʼಸುಪ್ರೀಂʼಗೆ ಗೃಹ ಸಚಿವಾಲಯ

ಕೃಪಾನುದಾನ ಎಂಬ ಪದ ಸ್ವತಃ ಕಾನೂನು ಅರ್ಹತೆ ಆಧರಿಸಿಲ್ಲ ಎಂದು ಸೂಚಿಸುತ್ತದೆ ಎಂಬುದಾಗಿ ಕೇಂದ್ರ ತಿಳಿಸಿದೆ.

Bar & Bench

ಕೋವಿಡ್‌ ಸಾಂಕ್ರಾಮಿಕದಿಂದ ಮೃತಪಟ್ಟವರಿಗೆ ರೂ 4 ಲಕ್ಷ ಕೃಪಾನುದಾನ ನೀಡುವುದು ಸಾಧ್ಯವಿಲ್ಲ. ಸರ್ಕಾರದ ಸಂಪನ್ಮೂಲಗಳಿಗೆ ಮಿತಿಗಳಿದ್ದು ಹಾಗೆ ಹಣ ವಿನಿಯೋಗಿಸಿದರೆ ಸರ್ಕಾರದ ವಿಪತ್ತು ಪರಿಹಾರ ನಿಧಿಯ ಸಂಪೂರ್ಣ ಮೊತ್ತ ಖಾಲಿಯಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಬದಲಿಗೆ ಇದು ಸಾಂಕ್ರಾಮಿಕ ರೋಗದ ಸ್ಪಂದನೆ ಕುರಿತ ಇತರೆ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒಳ್ಳೆಯದಕ್ಕಿಂತ ಹೆಚ್ಚಿನದಾಗಿ ಹಾನಿ ಮಾಡುವುದರಲ್ಲಿ ಅಂತ್ಯವಾಗುತ್ತದೆ ಎಂದು ಅದು ಹೇಳಿದೆ.

ಕೃಪಾನುದಾನ ನೀಡುವುದಕ್ಕಾಗಿ ವಿರಳ ಸಂಪನ್ಮೂಲ ಬಳಸುವುದರಿಂದ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟ ಮತ್ತು ಆರೋಗ್ಯಕ್ಕಾಗಿ ಬಳಸುವ ಧನದ ಮೇಲೆ ದುರದೃಷ್ಟಕರ ಪರಿಣಾಮ ಬೀರಬಹುದು. ಇದರಿಂದ ಒಳ್ಳೆಯದಕ್ಕಿಂತ ಹೆಚ್ಚಾಗಿ ಹಾನಿ ಉಂಟಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಗೃಹ ಸಚಿವಾಲಯ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಕೃಪಾನುದಾನ ನೀಡುವುದಕ್ಕಾಗಿ ವಿರಳ ಸಂಪನ್ಮೂಲ ಬಳಸುವುದರಿಂದ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟ ಮತ್ತು ಆರೋಗ್ಯಕ್ಕಾಗಿ ಬಳಸುವ ಧನದ ಮೇಲೆ ದುರದೃಷ್ಟಕರ ಪರಿಣಾಮ ಬೀರಬಹುದು. ಇದರಿಂದ ಒಳ್ಳೆಯದಕ್ಕಿಂತ ಹೆಚ್ಚಾಗಿ ಹಾನಿ ಉಂಟಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಗೃಹ ಸಚಿವಾಲಯ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ವಿಪತ್ತಿನಿಂದ ವಿಪತ್ತು ನಿರ್ವಹಣಾ ಕಾಯಿದೆ- 2005ರ ಸೆಕ್ಷನ್‌ 12ನ್ನು ಉಲ್ಲೇಖಿಸಿ ವಕೀಲರಾದ ಗೌರವ್ ಕುಮಾರ್ ಬನ್ಸಾಲ್ ಮತ್ತು ರೀಪಕ್ ಕನ್ಸಾಲ್ ಅವರು ಅರ್ಜಿ ಸಲ್ಲಿಸಿದ್ದರು. ದುರ್ಘಟನೆಗಳಿಂದ ತೊಂದರೆಗೊಳಗಾದ ವ್ಯಕ್ತಿಗಳಿಗೆ ಒದಗಿಸಬೇಕಾದ ಕನಿಷ್ಠ ಪರಿಹಾರ ಮಾನದಂಡಕ್ಕಾಗಿ ಕೃಪಾನುದಾನದ ನೆರವು ಒದಗಿಸುವುದು ಸೇರಿದಂತೆ ರಾಷ್ಟ್ರೀಯ ಪ್ರಾಧಿಕಾರ ಶಿಫಾರಸು ಮಾಡಬೇಕು ಎಂದು ಅದು ಹೇಳಿದೆ.

ನಾಲ್ಕು ಲಕ್ಷ ರೂಪಾಯಿಗಳ ಕೃಪಾನುದಾನ ನೀಡುವುದು ರಾಜ್ಯ ಸರ್ಕಾರಗಳ ಹಣಕಾಸು ಸಾಮರ್ಥ್ಯವನ್ನು ಮೀರಿದ್ದಾಗಿದೆ. ತೆರಿಗೆ ಕಡಿತ ಮತ್ತು ಆರೋಗ್ಯ ವೆಚ್ಚದಲ್ಲಿ ಹೆಚ್ಚಳ ಉಂಟಾಗಿರುವುದರಿಂದ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ತೀವ್ರ ಹಣಕಾಸು ಒತ್ತಡದಲ್ಲಿವೆ ಎಂದು ಕೂಡ ಕೇಂದ್ರ ತಿಳಿಸಿದೆ. ಕೃಪಾನುದಾನ ಎಂಬ ಪದ ಸ್ವತಃ ಕಾನೂನು ಅರ್ಹತೆ ಆಧರಿಸಿಲ್ಲ ಎಂದು ಸೂಚಿಸುತ್ತದೆ ಎಂಬುದಾಗಿ ಕೇಂದ್ರ ತಿಳಿಸಿದೆ.