Justice MR Shah, Justice BV Nagarathna and Supreme Court
Justice MR Shah, Justice BV Nagarathna and Supreme Court 
ಸುದ್ದಿಗಳು

ಕನಿಷ್ಠ ವೇತನ ಕಾಯಿದೆ ಸೆಕ್ಷನ್ 10ರ ಪ್ರಕಾರ ಅಂಕಗಣಿತ ಲೋಪ ಅಥವಾ ಅಕ್ಷರದೋಷ ಮಾತ್ರ ಸರಿಪಡಿಸಬಹುದು: ಸುಪ್ರೀಂ [ಚುಟುಕು]

Bar & Bench

ಕನಿಷ್ಠ ವೇತನ ನಿಗದಿಪಡಿಸುವಾಗ ಅಥವಾ ಪರಿಷ್ಕರಿಸುವಾಗ ಕನಿಷ್ಠ ವೇತನ ಕಾಯಿದೆಯ ಸೆಕ್ಷನ್ 10ರ ಅಡಿಯಲ್ಲಿ ಅಕ್ಷರದೋಷ ಅಥವಾ ಅಂಕಗಣಿತದ ತಪ್ಪುಗಳನ್ನು ಮಾತ್ರ ಸರಿಪಡಿಸಬಹುದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ [ಗೋಮಾಂತಕ್ ಮಜ್ದೂರ್ ಸಂಘ ಮತ್ತು ಗೋವಾ ಸರ್ಕಾರ ನಡುವಣ ಪ್ರಕರಣ].

ಅಂಕಗಣಿತ ದೋಷ ಅಥವಾ ಕ್ಲೆರಿಕಲ್ ದೋಷ ಎಂಬುದು ಲೆಕ್ಕಾಚಾರದಲ್ಲಿ ತಪ್ಪು ಅಥವಾ ಕಾಗುಣಿತ ಇಲ್ಲವೇ ಅಥವಾ ಮುದ್ರಣ ತಪ್ಪುಗಳನ್ನು ಒಳಗೊಂಡಿರುತ್ತದೆ ಎನ್ನುವುದನ್ನು ನ್ಯಾಯಾಲಯವು ಪರಿಗಣಿಸಿತು. ಮಾಸ್ಟರ್‌ ಕನ್‌ಸ್ಟ್ರಕ್ಷನ್‌ ಕಂಪೆನಿ ಪ್ರೈ ಲಿಮಿಟೆಡ್‌ ಮತ್ತು ಒರಿಸ್ಸಾ ಸರ್ಕಾರ ಇನ್ನಿತರರ ನಡುವಣ ಪ್ರಕರಣದಲ್ಲಿ (1966) ನೀಡಲಾಗಿದ್ದ ತೀರ್ಪನ್ನು ಆಧರಿಸಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಈ ಆದೇಶ ನೀಡಿದೆ.

ವಿವಿಧ ವಲಯಗಳ ಕಾರ್ಮಿಕರಿಗೆ ನಿಗದಿಪಡಿಸಿದ್ದ ಕನಿಷ್ಠ ವೇತನವನ್ನು ಗೋವಾ ಸರ್ಕಾರ ಅಧಿಸೂಚನೆಯೊಂದರ ಮೂಲಕ ಮಾರ್ಪಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಬಾಂಬೆ ಹೈಕೋರ್ಟ್‌ ಮೊರೆಹೋಗಿದ್ದರು. ಅಲ್ಲಿಯೂ ಅರ್ಜಿಯನ್ನು ವಜಾಗೊಳಿಸಿದ್ದರಿಂದ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅಧಿಸೂಚನೆ ತನ್ನ ಅಧಿಕಾರ ವ್ಯಾಪ್ತಿ ಮೀರಿದ್ದು ಕಾಯಿದೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ. ಎಂದು ತೀರ್ಪು ನೀಡಿದ ಪೀಠ ಮೇಲ್ಮನವಿಯನ್ನು ಪುರಸ್ಕರಿಸಿ ಹಳೆಯ ಅಧಿಸೂಚನೆಯನ್ನು ಮತ್ತೆ ಜಾರಿಗೊಳಿಸಲು ಸೂಚಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.