<div class="paragraphs"><p>Justice Ajay Rastogi and Justice Abhay S. Oka</p></div>

Justice Ajay Rastogi and Justice Abhay S. Oka

 
ಸುದ್ದಿಗಳು

[ಸೇವಾ ದುರ್ನಡತೆ] ಉದ್ಯೋಗಿ ನಿವೃತ್ತರಾದ ಮಾತ್ರಕ್ಕೆ ಆರೋಪದಿಂದ ಮುಕ್ತರಾಗುವುದಿಲ್ಲ: ಸುಪ್ರೀಂಕೋರ್ಟ್

Bar & Bench

ಉದ್ಯೋಗಿಯೊಬ್ಬರು ನಿವೃತ್ತರಾದ ಮಾತ್ರಕ್ಕೆ, ತಮ್ಮ ಕರ್ತವ್ಯ ನಿರ್ವಹಣೆ ಸಮಯದಲಿ ಎಸಗಿದ ದುಷ್ಕೃತ್ಯದಿಂದ ಅವರನ್ನು ಮುಕ್ತಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ [ಯುನೈಟೆಡ್ ಬ್ಯಾಂಕ್‌ ಆಫ್ ಇಂಡಿಯಾ ಮತ್ತು ಬಚನ್ ಪ್ರಸಾದ್ ಲಾಲ್ ನಡುವಣ ಪ್ರಕರಣ].

ಪ್ರತಿವಾದಿ-ನೌಕರನಿಗೆ ನೀಡಲಾದ ಶಿಕ್ಷೆಯನ್ನು ಕಡಿಮೆ ಮಾಡುವ ಕೈಗಾರಿಕಾ ನ್ಯಾಯಮಂಡಳಿಯ ನಿರ್ಧಾರವನ್ನು ಎತ್ತಿಹಿಡಿದು ಪಾಟ್ನಾ ಹೈಕೋರ್ಟ್‌ 2010ರಲ್ಲಿ ನೀಡಿದ್ದ ಆದೇಶದ ವಿರುದ್ಧ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಅಭಯ್ ಎಸ್ ಓಕಾ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.

ಉದ್ಯೋಗಿ ಈಗಾಗಲೇ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ನ್ಯಾಯಾಧಿಕರಣ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿತ್ತು. ಆದರೆ ಸೇವೆಯಲ್ಲಿದ್ದಾಗ, ತನ್ನ ಕರ್ತವ್ಯಗಳ ನಿರ್ವಹಣೆಯಲ್ಲಿ ಗಂಭೀರ ಅಕ್ರಮಗಳನ್ನು ಎಸಗಿದ್ದು ಸಾಬೀತಾಗಿತ್ತು.

ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸಿ, ಆರೋಪಿ ನೌಕರನಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದ ಪೀಠ ಒಬ್ಬ ಬ್ಯಾಂಕ್ ಉದ್ಯೋಗಿ ಯಾವಾಗಲೂ ನಂಬಿಕೆಯ ಸ್ಥಾನದಲ್ಲಿರುತ್ತಾನೆ, ಅಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆ ಎಂಬುದು ಅನಿವಾರ್ಯ. ಇಂತಹ ವಿಷಯಗಳಲ್ಲಿ ಮೃದುವಾಗಿ ವ್ಯವಹರಿಸುವುದು ಎಂದಿಗೂ ತರವಲ್ಲ ಎಂದಿತು.