Live-in Relationship.


 

indianewsnet.com

ಸುದ್ದಿಗಳು

[ಚುಟುಕು] ವಯಸ್ಕರು ಮದುವೆ ಅಥವಾ ಲಿವ್‌ ಇನ್‌ ಸಂಬಂಧದಲ್ಲಿರುವಾಗ ನೈತಿಕ ಪೊಲೀಸ್‌ಗಿರಿ ಸಲ್ಲದು: ಮ. ಪ್ರದೇಶ ಹೈಕೋರ್ಟ್‌

Bar & Bench

ಇಬ್ಬರು ವಯಸ್ಕರು ಮದುವೆ ಮೂಲಕ ಅಥವಾ ಲಿವ್‌ ಇನ್‌ ಸಂಬಂಧದಡಿ ಒಟ್ಟಿಗೆ ವಾಸಿಸಲು ಸಿದ್ಧರಿರುವಾಗ ನೈತಿಕ ಪೊಲೀಸ್‌ಗಿರಿ ನಡೆಸುವಂತಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ. ವಯಸ್ಸಿಗೆ ಬಂದಿರುವ ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ ಸ್ವಂತ ಇಚ್ಚೆಯಂತೆ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ನ್ಯಾ. ನಂದಿತಾ ದುಬೆ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು. ಅರ್ಜಿದಾರರನ್ನು ನನ್ನ ಸ್ವಂತ ಇಚ್ಚೆಯಂತೆ ಮದುವೆಯಾಗಿದ್ದು ಮತಾಂತರಕ್ಕೆ ಎಂದಿಗೂ ಅವರು ಬಲವಮತ ಮಾಡಿರಲಿಲ್ಲ ಎಂದು ಹತ್ತೊಂಬತ್ತು ವರ್ಷದ ಯುವತಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದರು. ವಾದ ಆಲಿಸಿದ್ದ ನ್ಯಾಯಾಲಯ ಯುವತಿಯ ಪೋಷಕರು ದಂಪತಿಗೆ ಬೆದರಿಕೆ ಒಡ್ಡದಂತೆ ಪೊಲೀಸರು ಕ್ರಮವಹಿಸಬೇಕು ಎಂದು ಕೂಡ ಸೂಚಿಸಿತು.

ಹೆಚ್ಚಿನ ವಿವರಗಳಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.