Mukul Rohatgi 
ಸುದ್ದಿಗಳು

ಭಾರತದ ಅಟಾರ್ನಿ ಜನರಲ್ ಹುದ್ದೆ ನಿರಾಕರಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ

ನನಗೆ ಬೇರೆಯದೇ ಆಲೋಚನೆ ಇದೆ ಎಂದು ಅವರು ʼಬಾರ್ ಅಂಡ್ ಬೆಂಚ್ʼಗೆ ಪ್ರತಿಕ್ರಿಯಿಸಿದ್ದಾರೆ.

Bar & Bench

ಕೇಂದ್ರ ಸರ್ಕಾರದ ಪ್ರಸ್ತಾಪಿಸಿದ್ದ ಭಾರತದ ಅಟಾರ್ನಿ ಜನರಲ್ (ಎಜಿ) ಹುದ್ದೆಯನ್ನು ಹಿರಿಯ ವಕೀಲ ಮುಕುಲ್ ರೋಹಟ್ಗಿ ನಿರಾಕರಿಸಿದ್ದಾರೆ. ನನಗೆ ಬೇರೆಯದೇ ಆಲೋಚನೆ ಇದೆ ಎಂದು ಅವರು ʼಬಾರ್‌ ಅಂಡ್‌ ಬೆಂಚ್‌ʼʼಗೆ ಪ್ರತಿಕ್ರಿಯಿಸಿದ್ದಾರೆ.

ರೋಹಟ್ಗಿ ಅವರು ಈ ಹಿಂದೆ ಪ್ರಸ್ತಾಪವನ್ನು ಒಪ್ಪಿದ್ದು ಈ ತಿಂಗಳ ಅಂತ್ಯಕ್ಕೆ ಹಾಲಿ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿತ್ತು.

ಕಳೆದ ಜೂನ್‌ನಲ್ಲಿ ಎ ಜಿ ವೇಣುಗೋಪಾಲ್‌ ಅವರ ಅಧಿಕಾರಾವಧಿಯನ್ನು ಮೂರು ತಿಂಗಳ ಅವಧಿಗೆ ಇಲ್ಲವೇ ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿತ್ತು. ಇದೇ ಸೆ. 30ಕ್ಕೆ ಈ ಅವಧಿ ಕೊನೆಗೊಳ್ಳಲಿದೆ.

ಕೇಂದ್ರದ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದ್ದರೆ ರೋಹಟ್ಗಿ ಅವರು ಎರಡನೇ ಬಾರಿಗೆ ಎಜಿ ಹುದ್ದೆ ಅಲಂಕರಿಸುತ್ತಿದ್ದರು. 2014ರಿಂದ 2017ರ ಅವಧಿಯಲ್ಲಿ ಅವರು ಎಜಿಯಾಗಿ ಸೇವೆ ಸಲ್ಲಿಸಿದ್ದರು.