Mullaperiyar dam and Supreme Court
ಭೌತಿಕವಾಗಿ ಕೇರಳದಲ್ಲಿದ್ದು ತಮಿಳುನಾಡಿನ ನಿರ್ವಹಣೆಗೆ ಸೇರಿರುವ ಮುಲ್ಲಪೆರಿಯಾರ್ ಜಲಾಶಯದ ಸುರಕ್ಷತೆಯ ಪರಿಶೀಲನೆಯನ್ನು ಹೊಸದಾಗಿ ನಡೆಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಜಲ ಆಯೋಗ ಮತ್ತು ಮೇಲ್ವಿಚಾರಣಾ ಸಮಿತಿ ತಿಳಿಸಿದೆ.
“ಸರಿ ಸುಮಾರು ವರ್ಷದ ಹಿಂದೆ ಫೆಬ್ರವರಿ 19ರಂದು ಮೇಲ್ವಿಚಾರಣಾ ಸಮಿತಿಯು ಜಲಾಶಯದ ದೃಷ್ಟಿಗೋಚರ ತಪಾಸಣೆ ನಡೆಸಿದ್ದು, ಆಗ ಒಟ್ಟಾರೆ ಜಲಾಶಯ ಮತ್ತು ಸಂಬಂಧಿತ ಉಪರಚನೆಗಳು ಸುಸ್ಥಿತಿಯಲ್ಲಿದ್ದವು” ಎಂದು ಕೇಂದ್ರ ಜಲ ಆಯೋಗವು ಗುರುವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ವಿವರಿಸಿದೆ.
“ಅದಾಗ್ಯೂ, ಜಲಾಶಯದ ಸುರಕ್ಷತೆಗೆ ಸಂಬಂಧಿಸಿದಂತೆ ಹೊಸದಾಗಿ ತಪಾಸಣೆ ನಡೆಸಬೇಕಿದೆ” ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಮುಲ್ಲಪೆರಿಯಾರ್ ಜಲಾಶಯದ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ಸುಪ್ರೀಂ ಕೋರ್ಟ್ ನೇಮಿಸಿರುವ ಮೇಲ್ವಿಚಾರಣಾ ಸಮಿತಿಯು ನಿಷ್ಕ್ರಿಯವಾಗಿದೆ ಎಂದು ಸಲ್ಲಿಕೆಯಾಗಿದ್ದ ಮನವಿಯ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸಲಾಗಿದೆ.