Anil Deshmukh, CBI
Anil Deshmukh, CBI  
ಸುದ್ದಿಗಳು

ಅನಿಲ್ ದೇಶ್‌ಮುಖ್ ಅವರನ್ನು ಏಪ್ರಿಲ್ 11ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿದ ಮುಂಬೈ ನ್ಯಾಯಾಲಯ

Bar & Bench

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸುವಂತೆ ಮುಂಬೈ ನ್ಯಾಯಾಲಯವು ಬುಧವಾರ ಆದೇಶಿಸಿದೆ.

ಏಪ್ರಿಲ್ 11, 2022 ರವರೆಗೆ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸುವಂತೆ ವಿಶೇಷ ಸಿಬಿಐ ನ್ಯಾಯಾಧೀಶ ಬಿ ಸಿ ಬಾರ್ಡೆ ಆದೇಶ ಪ್ರಕಟಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಈ ಹಿಂದೆ ದೇಶ್‌ಮುಖ್‌ ಅವರನ್ನು ಬಂಧಿಸಿತ್ತು. ಭ್ರಷ್ಟಾಚಾರ ಕುರಿತ ಇನ್ನೊಂದು ಪ್ರಕರಣದಲ್ಲಿ ಸಿಬಿಐ ಈಗ ಅವರನ್ನು ಬಂಧಿಸಿದೆ.

ಡಾ. ಜೈಶ್ರೀ ಪಾಟೀಲ್‌ ಅವರ ದೂರಿನ ಮೇರೆಗೆ ಆರಂಭಿಸಲಾದ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದ ಅಂಶಗಳ ಆಧಾರದ ಮೇಲೆ ದೇಶ್‌ಮುಖ್ ಮತ್ತು ಅಪರಿಚಿತರ ವಿರುದ್ಧ ಸಿಬಿಐ ಕಳೆದ ವರ್ಷ ಎಫ್‌ಐಆರ್ ದಾಖಲಿಸಿತ್ತು. ಮುಂಬೈನ ಮಾಜಿ ಪೊಲೀಸ್‌ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಸಲ್ಲಿಸಿದ ಮನವಿಯಲ್ಲಿ ಬಾಂಬೆ ಹೈಕೋರ್ಟ್‌ನಿಂದ ನಿರ್ದೇಶನ ದೊರೆತ ಬಳಿಕ ತನಿಖೆ ಆರಂಭಿಸಲಾಗಿತ್ತು.