ಸುದ್ದಿಗಳು

ನೇಪಾಳ: ಐದು ತಿಂಗಳಲ್ಲಿ ಎರಡನೇ ಬಾರಿಗೆ ವಿಸರ್ಜಿತ ಸಂಸತ್ತನ್ನು ಮರುಸ್ಥಾಪಿಸುವಂತೆ ಸೂಚಿಸಿದ ಸುಪ್ರೀಂಕೋರ್ಟ್

ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರನ್ನು ಎರಡು ದಿನಗಳಲ್ಲಿ ಪ್ರಧಾನಿಯಾಗಿ ನೇಮಕ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

Bar & Bench

ನೇಪಾಳದ ಸುಪ್ರೀಂಕೋರ್ಟ್‌ ಐದು ತಿಂಗಳಲ್ಲಿ ಎರಡನೇ ಬಾರಿಗೆ ವಿಸರ್ಜಿತ ಸಂಸತ್ತನ್ನು ಮರುಸ್ಥಾಪಿಸಿದೆ. ನೇಪಾಳಿ ಕಾಂಗ್ರೆಸ್‌ ಅಧ್ಯಕ್ಷ ಶೇರ್‌ ಬಹದ್ದೂರ್‌ ದೇವುಬಾ ಅವರನ್ನು ಎರಡು ದಿನಗಳಲ್ಲಿ ಪ್ರಧಾನಿಯಾಗಿ ನೇಮಕ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶಮ್‌ಶೇರ್‌ ರಾಣಾ, ನ್ಯಾಯಮೂರ್ತಿಗಳಾದ ದೀಪಕ್‌ ಕುಮಾರ್‌ ಕಾರ್ಕಿ, ಮೀರಾ ಖಾಡ್ಕಾ, ಈಶ್ವರ್‌ ಪ್ರಸಾದ್‌ ಖಾತಿವಾಡ ಹಾಗೂ ಡಾ. ಆನಂದ್‌ ಮೋಹನ್‌ ಭಟ್ಟಾರಾಯ್‌ ಅವರಿದ್ದ ಪೀಠ ಈ ಆದೇಶ ನೀಡಿದೆ.

ನೇಪಾಳದ ಸಂವಿಧಾನದ 76 (4) ನೇ ವಿಧಿಯ ಪ್ರಕಾರ ಪ್ರಧಾನಿಯಾಗಿ ನೇಮಕಗೊಂಡ 30 ದಿನಗಳೊಳಗೆ ದೇವುಬಾ ಅವರು ವಿಶ್ವಾಸ ಮತ ಗೆಲ್ಲಬೇಕಿದೆ.