Railways, Train  
ಸುದ್ದಿಗಳು

ರೈಲುಗಳಲ್ಲಿ ಹಾರ್ನ್ ಬಳಕೆ ಪ್ರಶ್ನಿಸಿದ್ದ ಮನವಿ ವಜಾ: ಅಗತ್ಯ ಚಟುವಟಿಕೆ ನಿರ್ಬಂಧಿಸಲಾಗದು ಎಂದ ಎನ್‌ಜಿಟಿ

ಶಬ್ದ ಮುಕ್ತ ವಾತಾವರಣ ಅಗತ್ಯವಿದೆಯಾದರೂ ಪರ್ಯಾಯ ಆಯ್ಕೆಗಳಿಲ್ಲದಿದ್ದಾಗ ಅಗತ್ಯ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ ಎಂದ ಹಸಿರು ಪೀಠ.

Bar & Bench

ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿ ಉಲ್ಲಂಘಿಸುವುದರಿಂದ ರೈಲುಗಳಲ್ಲಿ ಹಾರ್ನ್‌ ಬಳಕೆಗೆ ಕಡಿವಾಣ ಹಾಕಬೇಕೆಂದು ಕೋರಿದ್ದ ಅರ್ಜಿಯೊಂದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಇತ್ತೀಚೆಗೆ ವಜಾಗೊಳಿಸಿದೆ [ಅಶೋಕ್‌ ಮಲಿಕ್‌ ಮತ್ತು ರೈಲ್ವೆ ಇಲಾಖೆ ಇನ್ನಿತರರ ನಡುವಣ ಪ್ರಕರಣ].

ಬಹುತೇಕ ಜನರಿಗೆ ಸೇವೆ ಒದಗಿಸುವ ರೈಲ್ವೆ ಕಾರ್ಯಾಚರಣೆಯಿಂದ ಉಂಟಾಗುವ ಶಬ್ದದ ಉತ್ಪಾದನೆ ಭಂಗ ತರುತ್ತದೆ ಎನ್ನಲಾಗದು. ವಿಷಲ್‌ ಸಂಹಿತೆಯಡಿ ಹಾರ್ನ್‌ಗಳನ್ನು ಬಳಸಬೇಕಾಗುತ್ತದೆ. ಶಬ್ದ ಮುಕ್ತ ವಾತಾವರಣ ಅಗತ್ಯವಿದೆಯಾದರೂ ಪರ್ಯಾಯ ಆಯ್ಕೆಗಳಿಲ್ಲದಿದ್ದಾಗ ಅಗತ್ಯ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಆದರ್ಶ್ ಕುಮಾರ್ ಗೋಯೆಲ್, ಸುಧೀರ್ ಅಗರ್‌ವಾಲ್, ಅರುಣ್ ಕುಮಾರ್ ತ್ಯಾಗಿ, ಹಾಗೂ ಪರಿಣಿತ ಸದಸ್ಯರಾದ ಡಾ.ಎ ಸೆಂಥಿಲ್ ವೇಲ್ ಮತ್ತು ಡಾ.ಅಫ್ರೋಜ್ ಅಹ್ಮದ್ ಅವರನ್ನೊಳಗೊಂಡ ಹಸಿರು ಪೀಠ ಅಭಿಪ್ರಾಯಪಟ್ಟಿದೆ.

ರಾಜಸ್ಥಾನದ ಅಜ್ಮೀರ್‌ನ ವಿವಿಧ ಪ್ರದೇಶಗಳ ನಿವಾಸಿಗಳು ರೈಲ್ವೆ ಕಾರ್ಯಾಚರಣೆಯಿಂದ ಉತ್ಪತ್ತಿಯಾಗುವ ಶಬ್ದ ಮಾಲಿನ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದ್ದ ಮನವಿಯೊಂದರ ವಿಚಾರಣೆ ವೇಳೆ ನ್ಯಾಯಮಂಡಳಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Ashok_Malik___Anr__vs_Ministry_of_Railways___Ors_.pdf
Preview