Coca Cola

 
ಸುದ್ದಿಗಳು

ಅಂತರ್ಜಲ ಅಕ್ರಮ ಬಳಕೆ: ಕೋಕಾ- ಕೋಲಾ, ಪೆಪ್ಸಿ ಬಾಟ್ಲಿಂಗ್ ಕಾರ್ಖಾನೆಗಳಿಗೆ ₹25 ಕೋಟಿ ದಂಡ ವಿಧಿಸಿದ ಎನ್‌ಜಿಟಿ

ಅಂತರ್ಜಲ ಪಡೆಯಲು ಅಗತ್ಯವಾದ ನಿರಾಕ್ಷೇಪಣಾ ಪತ್ರ (ಎನ್ಒಸಿ) ಇಲ್ಲದೆ ಕಾರ್ಯನಿರ್ವಹಿಸುವುದರಿಂದ ಬಾಟ್ಲಿಂಗ್ ಕಂಪೆನಿಗಳು ಪರಿಸರ ಕಾನೂನನ್ನು ಉಲ್ಲಂಘಿಸುತ್ತಿವೆ ಎಂದು ಎನ್‌ಜಿಟಿ ತೀರ್ಪು ನೀಡಿದೆ.

Bar & Bench

ಅಂತರ್ಜಲದ ಅಕ್ರಮವಾಗಿ ಬಳಕೆ ಮಾಡಿದ್ದಕ್ಕೆ ಪರಿಹಾರವಾಗಿ ₹25 ಕೋಟಿ ದಂಡ ಪಾವತಿಸುವಂತೆ ಕೋಕಾ ಕೋಲಾ ಮತ್ತು ಪೆಪ್ಸಿಕೋ ಉತ್ಪನ್ನಗಳಿಗೆ ಜವಾಬ್ದಾರರಾಗಿರುವ ಎರಡು ಬಾಟ್ಲಿಂಗ್ ಕಂಪೆನಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಇತ್ತೀಚೆಗೆ ಆದೇಶಿಸಿದೆ. [ಸುಶೀಲ್‌ ಭಟ್‌ ಮತ್ತು ಮೂನ್‌ ಬಿವರೇಜಸ್‌ ಲಿಮಿಟೆಡ್‌ ಮತ್ತಿತರರ ನಡುವಣ ಪ್ರಕರಣ].

ಅಂತರ್ಜಲವನ್ನು ಹಿಂತೆಗೆದುಕೊಳ್ಳಲು ಅಗತ್ಯವಾದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಇಲ್ಲದೆ ಕಾರ್ಯನಿರ್ವಹಿಸುವುದರಿಂದ ಕಂಪನಿಗಳ ಬಾಟ್ಲಿಂಗ್‌ ಕಾರ್ಯಾಚರಣೆ ಕೇಂದ್ರೀಯ ಅಂತರ್ಜಲ ಪ್ರಾಧಿಕಾರದ (ಸಿಜಿಡಬ್ಲ್ಯೂಎ) ಪರಿಸರ ಕಾನೂನನ್ನು ಉಲ್ಲಂಘಿಸಿವೆ ಎಂದು ಎನ್‌ಜಿಟಿ ತೀರ್ಪು ನೀಡಿದೆ.

ಅಂತರ್ಜಲ ಮರುಪೂರಣಕ್ಕೆ ವ್ಯವಸ್ಥೆ ಮಾಡಲು ವಿಫಲವಾಗುವ ಮೂಲಕ ತಮ್ಮ ಪರವಾನಗಿಯ ನಿಯಮಗಳನ್ನು ಕೂಡ ಮೂನ್ ಬಿವರೇಜಸ್‌ (ಕೊಕೊ ಕೋಲಾ) ಮತ್ತು ವರುಣ್ ಬಿವರೇಜಸ್ (ಪೆಪ್ಸಿಕೋ) ಉಲ್ಲಂಘಿಸಿದ್ದು ಅಂತರ್ಜಲವನ್ನು ಅಕ್ರಮವಾಗಿ ಪಡೆದು ಪರಿಸರ ಹಾನಿ ಉಂಟುಮಾಡಿದ್ದಕ್ಕಾಗಿ ಒಟ್ಟು ₹ 25 ಕೋಟಿ ಪಾವತಿಸುವಂತೆ ನ್ಯಾಯಮಂಡಳಿ ಆದೇಶಿಸಿದೆ.

ಎನ್‌ಜಿಟಿ ಅಧ್ಯಕ್ಷ ಸುಪ್ರೀಂ ಕೋರ್ಟ್‌ನಿವೃತ್ತ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್, ನ್ಯಾಯಾಂಗ ಸದಸ್ಯರಾದ ಸುಧೀರ್ ಅಗರ್ವಾಲ್ ಮತ್ತು ಬ್ರಿಜೇಶ್ ಸೇಥಿ, ಪರಿಣತ ಸದಸ್ಯರಾದ ಪ್ರೊ. ಎ ಸೆಂಥಿಲ್ ವೇಲ್ ಮತ್ತು ಡಾ ಅಫ್ರೋಜ್ ಅಹ್ಮದ್ ಅವರನ್ನೊಳಗೊಂಡ ನ್ಯಾಯಮಂಡಳಿ ಈ ತೀರ್ಪು ನೀಡಿತು.

ಕೇಂದ್ರೀಯ ಅಂತರ್ಜಲ ಪ್ರಾಧಿಕಾರದ (ಸಿಜಿಡಬ್ಲ್ಯೂಎ) ಕಾರ್ಯಲೋಪದ ಬಗ್ಗೆ ನ್ಯಾಯಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಧಿಕಾರ ವ್ಯಾಪ್ತಿ ಇಲ್ಲದಿದ್ದರೂ ಕಂಪೆನಿಗಳಿಗೆ ಅಂತರ್ಜಲ ತೆಗೆಯಲು ಅನುಮತಿ ನೀಡಿದ ಉತ್ತರ ಪ್ರದೇಶ ಅಂತರ್ಜಲ ಇಲಾಖೆಯನ್ನೂ (ಯುಪಿಜಿಡಬ್ಲ್ಯೂಡಿ) ಅದು ಇದೇ ವೇಳೆ ತರಾಟೆಗೆ ತೆಗೆದುಕೊಂಡಿತು.