NLAT-2020 NLS
NLAT-2020 NLS 
ಸುದ್ದಿಗಳು

ರಾಷ್ಟ್ರೀಯ ಕಾನೂನು ಶಾಲೆಯನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಅಭಿಯಾನ ನಡೆಸಲಾಯಿತು: ಎನ್ಎಲ್ಎಸ್‌ಐಯು

Bar & Bench

ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆಯು (ಎನ್‌ಎಲ್‌ಎಟಿ-2020) ಹೊರಗಿಡುವಿಕೆ ಮತ್ತು ಪ್ರವೇಶಕ್ಕೆ ಅಡ್ಡಿಪಡಿಸುವ ಕ್ರಿಯೆ ಎಂದು ಆರೋಪಿಸಿದ್ದ ಟೀಕಾಕಾರರ ವಿರುದ್ಧ ತಿರುಗಿ ಬಿದ್ದಿರುವ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ಕಟು ಶಬ್ದಗಳನ್ನೊಳಗೊಂಡ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.

“ಊಹೆಗಳು, ಸುಳ್ಳುಗಳು ಮತ್ತು ತಿರುಚಿದ ವಿಚಾರಗಳನ್ನು ಒಳಗೊಂಡ ವ್ಯವಸ್ಥಿತವಾದ ದುರುದ್ದೇಶಪೂರಿತ ಅಭಿಯಾನಕ್ಕೆ ವಿಶ್ವವಿದ್ಯಾಲಯವನ್ನು ಈಡುಮಾಡಲಾಯಿತು. ರಾಷ್ಟ್ರೀಯ ಮಟ್ಟದಲ್ಲಿ, ಎನ್‌ಎಲ್ಎಟಿ 2020 ಮಾದರಿಯಲ್ಲಿ ಇಷ್ಟು ಅಗಾಧವಾದ ರೀತಿಯಲ್ಲಿ ಹಲವು ಪ್ರಕ್ರಿಯೆ ಮತ್ತು ಮೂಲಸೌಕರ್ಯವನ್ನು ಯಾರೂ ಕಲ್ಪಿಸಿಲ್ಲ. ಆದರೂ ನಮ್ಮ ವಿರುದ್ಧ ಹೊರಗಿಡುವಿಕೆಯ ಆರೋಪ ಹೊರಿಸಲಾಗಿದೆ” ಎಂದು ವಿಶ್ವವಿದ್ಯಾಲಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ವ್ಯವಸ್ಥಿತ ಪಿತೂರಿ ಅಭಿಯಾನದಿಂದ ವಿಚಲರಿತಗಾದಂತೆ ಮನವಿ ಮಾಡಿರುವ ಎನ್‌ಎಲ್‌ಎಸ್ಐಯು ಪ್ರವೇಶ ಪರೀಕ್ಷಾ ಪ್ರಕ್ರಿಯೆ ಮೇಲೆ ನಂಬಿಕೆ ಇಟ್ಟ ಪೋಷಕರು ಮತ್ತು ಅಭ್ಯರ್ಥಿಗಳಿಗೆ ಧನ್ಯವಾದ ಸಲ್ಲಿಸಿದೆ. ಎನ್‌ಎಲ್‌ಎಟಿ ಬಳಿಕ ಪರೀಕ್ಷೋತ್ತರ ಪರಿಶೋಧನೆ ಬಿಡುಗಡೆ ಮಾಡಿರುವ ಎನ್‌ಎಲ್‌ಎಸ್‌ಐಯು ದುಷ್ಕೃತ್ಯಗಳಲ್ಲಿ ಭಾಗಿಯಾದವರನ್ನು ಪ್ರವೇಶಾತಿ ಪ್ರಕ್ರಿಯೆಯಿಂದ ಹೊರಗಿಡುವುದಾಗಿ ಘೋಷಿಸಿದೆ.

ಕೆಲವು ಪ್ರಕರಣಗಳಲ್ಲಿ ಕ್ರಿಮಿನಲ್ ತನಿಖೆಯ ಅಗತ್ಯವಿದೆ. ‘ಕೆಲವು ಶಕ್ತಿಗಳ’ ವಿರುದ್ಧ ವಿಶ್ವವಿದ್ಯಾಲಯವು ಕ್ರಮಕೈಗೊಳ್ಳಲಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.

ಪರೀಕ್ಷೆಯ ಋಜುತ್ವವನ್ನು ಕಾಪಾಡುವ ದೃಷ್ಟಿಯಿಂದ ಪರೀಕ್ಷೋತ್ತರ ಪರಿಶೋಧನೆ ಅತ್ಯಗತ್ಯ. ವಿಶ್ವವಿದ್ಯಾಲಯದ ಸಿಬ್ಬಂದಿ, ಬೋಧಕರು ಮತ್ತು ಹೊರಗಿನ (ಥರ್ಡ್‌ ಪಾರ್ಟಿ) ತಾಂತ್ರಿಕ ನಿಪುಣರು ಡಿಜಿಟಲ್ ದಾಖಲೆಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಹೆಚ್ಚುವರಿಯಾಗಿ ಸಹಭಾಗಿತ್ವ ಹೊಂದಿರುವ ತಾಂತ್ರಿಕ ಸಂಸ್ಥೆಯು ಏಳು ಪರಿಮಾಣಗಳನ್ನು ಆಧಾರವಾಗಿಟ್ಟುಕೊಂಡು ಅಭ್ಯರ್ಥಿಯ ನಡತೆಯನ್ನು ಪರಿಶೀಲಿಸಿ, ವಿಶ್ಲೇಷಣೆ ಮಾಡಲಾಗುವುದು ಎನ್‌ಎಲ್‌ಎಸ್‌ಐಯು ವಿವರಿಸಿದೆ.

ದುಷ್ಕೃತ್ಯದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳನ್ನು ಪ್ರವೇಶಾತಿ ಪ್ರಕ್ರಿಯೆಯಿಂದ ಹೊರಗಿಡುವ ಏಕೈಕ ಉದ್ದೇಶ ಇದರ ಹಿಂದೆ ಎಂದು ತಿಳಿಸಲಾಗಿದೆ.