Leaked 
ಸುದ್ದಿಗಳು

ಬ್ರೇಕಿಂಗ್‌: ಎನ್‌ಎಲ್‌ಎಟಿ ಮರುಪರೀಕ್ಷೆ ಪ್ರಶ್ನೆಪತ್ರಿಕೆಯು ಸೋರಿಕೆಯಾಗಿರುವುದನ್ನು ಖಚಿತ ಪಡಿಸಿದ ವಿದ್ಯಾರ್ಥಿಗಳು

ಅತ್ತ ಸೋಮವಾರ ಎನ್‌ಎಲ್‌ಎಟಿ ಮರುಪರೀಕ್ಷೆಯು ನಡೆಯುತ್ತಿರುವಾಗಲೇ ಬಾರ್‌ ಅಂಡ್‌ ಬೆಂಚ್‌ ಗೆ ಪ್ರಶ್ನೆಪತ್ರಿಕೆಯ ಪ್ರತಿಯೊಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ತಲುಪಿತು.

Bar & Bench

ಎನ್‌ಎಲ್‌ಎಟಿ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ವಿವಾದಗಳು ಸದ್ಯಕ್ಕೆ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಇದಕ್ಕೆ ಹೊಸ ಸೇರ್ಪಡೆಯೆಂದರೆ ಸೋಮವಾರ ನಡೆದ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯು ಸೋರಿಕೆಯಾಗಿರುವುದು. ಅತ್ತ ಪರೀಕ್ಷೆಯು ನಡೆಯುತ್ತಿರುವಾಗಲೇ ಇತ್ತ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನೊಳಗೊಂಡ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿದವು.

ಇಂದು ಮಧ್ಯಾಹ್ನ 12:30ರಿಂದ 1:15ರ ವರೆಗೆ ನಡೆದ ಈ ಮರುಪರೀಕ್ಷೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ಮರುಪರೀಕ್ಷೆಯಲ್ಲಿ ನೀಡಲಾದ ಪ್ರಶ್ನೆಪತ್ರಿಕೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಪ್ರಶ್ನೆಪತ್ರಿಕೆಗಳು ಒಂದೇ ಎನ್ನುವುದನ್ನು ಪ್ರಾಥಮಿಕವಾಗಿ ಖಚಿತಪಡಿಸಿದ್ದಾರೆ.

ಈ ಕುರಿತ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್ಎಲ್‌ಎಸ್‌ಐಯು) ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.

ಇದಕ್ಕೂ ಮೊದಲು, ಶನಿವಾರ ನಡೆದ ಎನ್‌ಎಲ್‌ಎಟಿ ಪರೀಕ್ಷೆಯು ತಾಂತ್ರಿಕ ಅಡಚಣೆಗಳ ಕಾರಣದಿಂದಾಗಿಯೇ ಸುದ್ದಿಯಾಗಿತ್ತು. ಅಭ್ಯರ್ಥಿಗಳ ದೃಢೀಕರಣ, ಮುಖಚಹರೆಯ ಗುರುತಿಸುವಿಕೆ, ಲಾಗಿನ್‌ ಸಮಸ್ಯೆಗಳು ಮುಂತಾದ ಅನೇಕ ತೊಂದರೆಗಳು ಶನಿವಾರದ ಪರೀಕ್ಷೆಯ ವೇಳೆ ಉದ್ಭವಿಸಿದ್ದವು.

ತಾಂತ್ರಿಕ ತೊಂದರೆಗಳನ್ನು ಅನುಭವಿಸಿದ ವಿದ್ಯಾರ್ಥಿಗಳು ಈ ಬಗ್ಗೆ ಗಮನಸೆಳೆದ ನಂತರ ವಿವಿಯು ಮರುಪರೀಕ್ಷೆಯನ್ನು ಕೈಗೊಳ್ಳುವ ತೀರ್ಮಾನ ಕೈಗೊಂಡಿತ್ತು.