NLSIU
NLSIU 
ಸುದ್ದಿಗಳು

ಎನ್‌ಎಲ್‌ಎಟಿ 2020: ಮೂರು ಸೆಷನ್ ಗಳಲ್ಲಿ ಪದವಿ ಪ್ರವೇಶಾತಿ ಪರೀಕ್ಷೆ

Bar & Bench

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಈ ಸಾಲಿನ ಪದವಿ ಕೋರ್ಸ್‌ಗಳ ರಾಷ್ಟ್ರೀಯ ಕಾನೂನು ಪ್ರವೇಶ ಪರೀಕ್ಷೆ (ಎನ್‌ಎಲ್‌ಎಟಿ) ಮೂರು ಸೆಷನ್ ಗಳಲ್ಲಿ ನಡೆಯಲಿದೆ.

ಎನ್‌ಎಲ್‌ಎಟಿಯ ನಡವಳಿಕೆಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನು ಬಗೆಹರಿಸಲು, ವಿಶ್ವವಿದ್ಯಾಲಯ ತನ್ನ ವೆಬ್‌ಸೈಟ್‌ನ FAQ ವಿಭಾಗದಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದೆ.

ವಿಶ್ವವಿದ್ಯಾಲಯ ಹೇಳಿರುವಂತೆ

" ಇತರ ದೊಡ್ಡ ಪರೀಕ್ಷೆಗಳಿಗೆ ಅನುಗುಣವಾಗಿ ಮೂರು ಸೆಷನ್‌ಗಳಲ್ಲಿ 2020ನೇ ಸಾಲಿನ ಎನ್‌ಎಲ್‌ಎಟಿ ಪದವಿ ಪ್ರವೇಶಾತಿ ಪರೀಕ್ಷೆ ನಡೆಸಲಾಗುವುದು. ವಿವಿಧ ಪ್ರಶ್ನೆ ಪತ್ರಿಕೆಗಳಲ್ಲಿ ಸಮಾನತೆ ಕಾಪಾಡಿಕೊಳ್ಳುವ ಪ್ರಯತ್ನದ ನಡುವೆಯೂ ವಿವಿಧ ಸೆಷನ್‌ಗಳಲ್ಲಿ ನಿರ್ವಹಿಸುವ ಪ್ರಶ್ನೆ ಪತ್ರಿಕೆಗಳ ಕಠಿಣತೆ ಒಂದೇ ರೀತಿ ಇರದಿರಬಹುದು "
ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ

ಈ ಹಿನ್ನೆಲೆಯಲ್ಲಿ, ಸಾಮಾನ್ಯೀಕರಿಸುವ ವಿಧಾನ ಪರಿಚಯಿಸಲು ವಿಶ್ವವಿದ್ಯಾಲಯ ಮುಂದಾಗಿದೆ.

"ಇದನ್ನು ಬಗೆಹರಿಸುವ ಉದ್ದೇಶದಿಂದ ಎಲ್ಲಾ ಬ್ಯಾಚ್‌ಗಳಲ್ಲಿ ಪಡೆದ ಕಾನೂನು ಅಂಕಗಳನ್ನು ಕ್ರೋಢೀಕರಿಸಲಾಗುವುದು; ಪರೀಕ್ಷೆಯ ಕಠಿಣತೆಯ ಮಟ್ಟದ ಕಾರಣದಿಂದಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗಲಿ, ಅನನುಕೂಲವಾಗಲಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು."

ಸೆಪ್ಟೆಂಬರ್ 12 ರಂದು ಪರೀಕ್ಷೆ ನಡೆಯಲಿದೆ.

ಈ ಮಧ್ಯೆ, ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ಅಂಕಗಳನ್ನು ಪರಿಗಣಿಸುವ ಬದಲು ಕಾನೂನು ಶಾಲೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅನೇಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಐವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಾಳೆ ಜಾರ್ಖಂಡ್ ಹೈಕೋರ್ಟ್‌ ನಲ್ಲಿ ನಡೆಯಲಿದೆ.

ಕಾನೂನು ಶಾಲೆಯ ಮಾಜಿ ಉಪಕುಲಪತಿ ಪ್ರೊಫೆಸರ್ ವೆಂಕಟರಾವ್ ಮತ್ತು ಅನ್ಯಾಯಕ್ಕೊಳಗಾದ ಪೋಷಕ ವರ್ಗದವರ ಅರ್ಜಿ ಕೂಡ ಈ ವಾರ ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.