ಜಾರಿ ನಿರ್ದೇಶನಾಲಯ, ದೆಹಲಿ 
ಸುದ್ದಿಗಳು

ಜಾರಿ ನಿರ್ದೇಶನಾಲಯದ ಸಮನ್ಸ್‌ನಿಂದ ಯಾರೂ ಜಾರಿಕೊಳ್ಳುವಂತಿಲ್ಲ: ಕೇರಳ ಹೈಕೋರ್ಟ್

ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದವರು ಒಮ್ಮೆಯೂ ಅದರೆದುರು ಹಾಜರಾಗಲು ನಿರಾಕರಿಸಿದ ಹಲವು ಉದಾಹರಣೆಗಳಿವೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ತಿಳಿಸಿದರು.

Bar & Bench

ಜಾರಿ ನಿರ್ದೇಶನಾಲಯದಿಂದ (ಇ ಡಿ) ಸಮನ್ಸ್‌ ಪಡೆದವರೆಲ್ಲರೂ ಅದರೆದುರು ಹಾಜರಾಗಬೇಕು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ಪ್ರಶಾಂತ್ ಪಿ ನಾಯರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ]

ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದವರು ಒಮ್ಮೆಯೂ ಅದರೆದುರು ಹಾಜರಾಗಲು ನಿರಾಕರಿಸಿದ ಹಲವು ಉದಾಹರಣೆಗಳಿವೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ತಿಳಿಸಿದರು

ನ್ಯಾಯಮೂರ್ತಿ ದೇವನ್ ರಾಮಚಂದ್ರನ್

ನನ್ನ ಪ್ರಕಾರ ಯಾವುದೇ ಹುದ್ದೆಯಲ್ಲಿರಲಿ ಪ್ರತಿಯೊಬ್ಬರೂ ಇ ಡಿ ಹೊರಡಿಸುವ ಸಮನ್ಸ್‌ಗೆ ಪ್ರತಿಕ್ರಿಯಿಸಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಒಮ್ಮೆ ಇ ಡಿ ಮುಂದೆ ಹಾಜರಾಗಿ ಮರಳಿದರೆ ನ್ಯಾಯಾಲಯ ಸಹಾಯ ಮಾಡಬಹುದು. ಆದರೆ ಸಮನ್ಸ್‌ನಿಂದ ದೂರ ಉಳಿಯದಿರಿ ಎಂದು ಕಿವಿಮಾತು ಹೇಳಿದ ನ್ಯಾಯಾಲಯ ತನಿಖಾಧಿಕಾರಿಗಳು ಸಮನ್ಸ್ ನೀಡಿದಾಗ, ನಾವು ಅದರಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ನಾವೆಲ್ಲರೂ ನಾಗರಿಕರು. ಇಡಿ ನನಗೆ ಸಮನ್ಸ್ ನೀಡಿದರೆ ನಾನು ಕೂಡ ಹೋಗಬೇಕು. ನಮ್ಮಲ್ಲಿ ಯಾರೂುಳಿದವರಿಗಿಂತ ಮೇಲಲ್ಲ. ಆದ್ದರಿಂದ ದಯವಿಟ್ಟು ಸಮನ್ಸ್‌ಗೆ ಉತ್ತರಿಸಿ ಎಂದಿತು.

'ವೆಬ್‌ಮೆಪ್‌ ಟ್ರೇಡರ್ಸ್' ಎಂಬ ಇ- ವಾಣಿಜ್ಯ ಸಂಸ್ಥೆ ನಡೆಸುತ್ತಿರುವ ಪ್ರಶಾಂತ್ ಪಿ ನಾಯರ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಮಾರ್ಚ್ 7ರಂದು ವಿಚಾರಣೆ ನಡೆಸಿದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನಾಯರ್‌ ಮತ್ತು ಹೈರಿಚ್ ಆನ್‌ಲೈನ್‌ ಶಾಪಿ ಸಂಸ್ಥೆ ನಡುವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯರ್‌ ಅವರಿಗೆ ಇ ಡಿ ಸಮನ್ಸ್‌ ನೀಡಿತ್ತು. ಇದಕ್ಕೆ ಅವರು ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಇ ಡಿ ನ್ಯಾಯಾಲಯದ ಮೊರೆ ಹೋಗಿತ್ತು.

ಗುರುವಾರ ನಡೆದ ವಿಚಾರಣೆಯ ವೇಳೆ, ಎರಡೂ ಪಕ್ಷಕರಾರರ ಸಮ್ಮತಿಯೊಂದಿಗೆ, ಮಾರ್ಚ್ 12ರಂದು ಇಡಿ ಮುಂದೆ ಹಾಜರಾಗುವಂತೆ ನ್ಯಾಯಾಲಯ ನಾಯರ್‌ಗೆ ನಿರ್ದೇಶನ ನೀಡಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Prasanth P Nair v. Union of India.pdf
Preview