School Children 
ಸುದ್ದಿಗಳು

ಪಿಟಿ ಅಥವಾ ಕಲಾ ತರಗತಿಗಳ ಅವಧಿಯಲ್ಲಿ ಬೇರೆ ವಿಷಯ ಕಲಿಸುವಂತಿಲ್ಲ: ಕೇರಳ ಸರ್ಕಾರ ಆದೇಶ

ಕಲೆ, ಆಟೋಟದಂತಹ ಚಟುವಟಿಕೆಗಳಿಗೆ ಮೀಸಲಿಟ್ಟ ಅವಧಿಯಲ್ಲಿ ಬೇರೆ ವಿಷಯಗಳನ್ನು ಕಲಿಸಲಾಗುತ್ತಿದೆ ಎಂದು ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ.

Bar & Bench

ದೈಹಿಕ ತರಬೇತಿ (ಪಿಟಿ), ಕಲೆ ಹಾಗೂ ಆಟೋಟಗಳಿಗೆ ಮೀಸಲಿಟ್ಟ ತರಗತಿಯ ಅವಧಿಯಲ್ಲಿ ಬೇರೆ ವಿಷಯಗಳನ್ನು ಕಲಿಸದಂತೆ ಕ್ರಮ ವಹಿಸಲು ಕೇರಳ ಸರ್ಕಾರ ಇತ್ತೀಚೆಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.

ಮಕ್ಕಳ ಹಕ್ಕುಗಳ ಆಯೋಗವು ಪಿಟಿ/ಕಲೆ ತರಗತಿ ಅವಧಿಯಲ್ಲಿ ಇತರ ವಿಷಯಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿದ ನಂತರ ಈ ಆದೇಶವನ್ನು ಅಂಗೀಕರಿಸಲಾಗಿದೆ.

ಹಾಗಾಗಿ 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪಿಟಿ ಮತ್ತು ಕಲಾ ವಿಭಾಗದಲ್ಲಿ ಬೇರೆ ಯಾವುದೇ ವಿಷಯಗಳನ್ನು ಬೋಧಿಸಬಾರದು ಎಂದು ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿಂಧು ಜೆ ಅವರು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.