ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಪುನಾರಚನೆ ಹಾಗೂ ಭದ್ರತಾ ಕ್ರಮ ಜಾರಿ ಕಾಯಿದೆ (ಸರ್ಫೇಸಿ ಕಾಯಿದೆ) 2002ರ ಅಡಿಯಲ್ಲಿ ಜಾರಿಗೆ ತಂದ ನಿಯೋಜನೆ ಪತ್ರದ ಜೊತೆಗೆ ಸಹಿ ಮಾಡಲಾದ ಪವರ್ ಆಫ್ ಅಟಾರ್ನಿ ದಾಖಲೆಗೆ ಪ್ರತ್ಯೇಕ ಮುದ್ರಾಂಕ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ [ಅಸೆಟ್ ರೀ ಕನ್‌ಸ್ಟ್ರಕ್ಷನ್ ಕಂಪೆನಿ (ಇಂಡಿಯಾ) ಲಿಮಿಟೆಡ್ ಮತ್ತು ಮುಖ್ಯ ನಿಯಂತ್ರಣ ಕಂದಾಯ ಅಧಿಕಾರಿ ನಡುವಣ ಪ್ರಕರಣ].
ನಿಯೋಜನೆ ಪತ್ರಕ್ಕೆ ಮುದ್ರಾಂಕ ಶುಲ್ಕ ಪಾವತಿಸಿದ್ದರೂ ಸಹ ಪವರ್ ಆಫ್ ಅಟಾರ್ನಿಗಾಗಿ ಮುದ್ರಾಂಕ ಶುಲ್ಕವನ್ನು ಸ್ವತಂತ್ರವಾಗಿ ಪಾವತಿಸಬೇಕಾಗುತ್ತದೆ ಎಂಬ ಗುಜರಾತ್ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತು.
ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಹೇಮಂತ್ ಗುಪ್ತಾ ಅವರಿದ್ದ ಪೀಠವು ಪವರ್ ಆಫ್ ಅಟಾರ್ನಿಯು (ಪಿಒಎ) ಸರ್ಫೇಸಿ ಕಾಯಿದೆಯಡಿ ಜಾರಿಗೆ ತಂದ ಮಾರಾಟ ಒಪ್ಪಂದಗಳ ಅವಿಭಾಜ್ಯ ಅಂಗವಾಗಿದೆ ಎಂದಿತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.