Lawyers 
ಸುದ್ದಿಗಳು

'ನ್ಯಾಯ' ಕನ್ನಡ ಮುಖ್ಯಸ್ಥರ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಬಯಸುವವರು ಐದು ವರ್ಷ ಕಾನೂನು ಶಿಕ್ಷಣ ಬೋಧನೆ ಅಥವಾ ಪ್ರಾಕ್ಟೀಸ್‌ ಮಾಡಿರಬೇಕು. ವಿಶೇಷವಾಗಿ ಕನ್ನಡ ಭಾಷೆಯ (ಬರವಣಿಗೆ) ಮೇಲೆ ಹಿಡಿತವಿರಬೇಕು.

Bar & Bench

ಕರ್ನಾಟಕದಲ್ಲಿ ಕಾನೂನು ಅರಿವು ಪ್ರಸರಣ ಮತ್ತು ನ್ಯಾಯದಾನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಶೀಲವಾಗಿರುವ ನ್ಯಾಯ ಸಂಸ್ಥೆಯು ನಾಗರಿಕರನ್ನು ಕಾನೂನು ಮಾಹಿತಿಯ ಮೂಲಕ ಸಬಲರನ್ನಾಗಿಸುವ ಉದ್ದೇಶದಿಂದ 'ನ್ಯಾಯ ಕನ್ನಡ ಮುಖ್ಯಸ್ಥ' ಹುದ್ದೆಗೆ ಅನುಭವಿ ಹಿರಿಯ ವಕೀಲರಿಂದ ಅರ್ಜಿ ಆಹ್ವಾನಿಸಿದೆ.

ಆಯ್ಕೆಯಾದ ವಕೀಲರು ಕಾನೂನು ವಿಚಾರಗಳ ಕುರಿತಾದ ಮಾಹಿತಿಯ ಸೃಜನೆ, ಪ್ರಸಾರ, ಪ್ರಚಾರವನ್ನು ನಿಭಾಯಿಸಬೇಕು. ಅಲ್ಲದೆ ರಾಜ್ಯ ಮತ್ತು ಪಾಲುದಾರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಿಕೆ ಹಾಗೂ ನ್ಯಾಯ ಫೆಲೋಶಿಪ್‌ ಪಡೆದಿರುವ ಜಿಲ್ಲಾ ವಕೀಲರ ಆಡಳಿತಾತ್ಮಕ ನಿರ್ವಹಣೆಯ ಹೊಣೆಯನ್ನು ನೋಡಿಕೊಳ್ಳಬೇಕಾಗುತ್ತದೆ.

ಅರ್ಜಿ ಸಲ್ಲಿಸಬಯಸುವವರು ಐದು ವರ್ಷ ಕಾನೂನು ಶಿಕ್ಷಣ ಬೋಧನೆ ಅಥವಾ ಪ್ರಾಕ್ಟೀಸ್‌ ಮಾಡಿರಬೇಕು. ವಿಶೇಷವಾಗಿ ಕನ್ನಡ ಭಾಷೆಯ (ಬರವಣಿಗೆ) ಮೇಲೆ ಹಿಡಿತವಿರಬೇಕು. ಸಂಶೋಧನೆ ಮತ್ತು ಬರವಣಿಗೆ ಕೌಶಲ ಇರಬೇಕು. ಯೋಜನಾ ನಿರ್ವಹಣೆ, ವಿಭಿನ್ನ ವಿಭಾಗಗಳೊಂದಿಗಿನ ಸಮನ್ವಯ ಸಾಧನೆ ಮತ್ತು ರಾಜ್ಯ ಸರ್ಕಾರ ಮತ್ತು ಪಾಲುದಾರಿಕೆ ಹೊಂದಿರುವ ಎನ್‌ಜಿಒಗಳ ಜೊತೆ ಉತ್ತಮ ಸಂಬಂಧ ಬೆಸೆಯಬೇಕು.

ಹುದ್ದೆಯು ಪೂರ್ಣಾವಧಿಯದಾಗಿದ್ದು ಬೆಂಗಳೂರಿನಿಂದ ನಿರ್ವಹಣೆಗೊಳ್ಳುತ್ತದೆ. ಉದ್ಯಮದಲ್ಲಿನ ಮಾನದಂಡಗಳಿಗೆ ಅನುಗುಣವಾಗಿ ಸಂಭಾವನೆ ಇರಲಿದೆ. ಆರು ತಿಂಗಳು ಪ್ರೊಬೇಷನರಿ ಅವಧಿ ಇರಲಿದೆ. https://vclp.keka.com/careers/jobdetails/46255 ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗೆ contact@nyaaya.in ಸಂಪರ್ಕಿಸಬಹುದು. ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಲು https://kannada.nyaaya.org ಭೇಟಿ ನೀಡಬಹುದು.