'ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ'ಯ ಉಪಕ್ರಮವಾದ 'ನ್ಯಾಯ', ತನ್ನ ಪ್ರಮುಖ 'ಸಂವಿಧಾನ ಫೆಲೋಶಿಪ್' ಅಡಿಯಲ್ಲಿ 'ಲೀಡ್ - ನ್ಯಾಯ ಕರ್ನಾಟಕ' ಹುದ್ದೆಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ. ಹುದ್ದೆಯು ಪೂರ್ಣಾವಧಿಯದ್ದಾಗಿರಲಿದ್ದು, ಮಾಸಿಕ ₹70,000 – ₹80,000 (ಅನುಭವಕ್ಕೆ ಅನುಗುಣವಾಗಿ) ವೇತನ ಇರಲಿದೆ.
ಕಾನೂನು ಪದವಿ ಹೊಂದಿರುವ ಕಾನೂನು ವ್ಯಾಜ್ಯ, ಕಾನೂನು ನೆರವು, ಕಾರ್ಯಕ್ರಮ ನಿರ್ವಹಣೆ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 6 ವರ್ಷಗಳ ಅನುಭವ ಹೊಂದಿರಬೇಕು.
ಆಸಕ್ತ ಅಭ್ಯರ್ಥಿಗಳು 'ವಿಧಿ' ಸಂಸ್ಥೆಯ ಆನ್‌ಲೈನ್ ಅರ್ಜಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. (https://vclp.keka.com/careers/jobdetails/137757).
ಆನ್‌ಲೈನ್ ಪೋರ್ಟಲ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು; ಅಪೂರ್ಣ ಅರ್ಜಿಗಳನ್ನು ಪರಿಶೀಲಿಸಲಾಗುವುದಿಲ್ಲ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆಯಲು ಮತ್ತು ಮಾತನಾಡುವುದು ಅಹತ್ಯ. ಮೊಕದ್ದಮೆ ಪ್ರಕ್ರಿಯೆ, ನ್ಯಾಯಾಲಯದ ಕಾರ್ಯವಿಧಾನ ಮತ್ತು ಕಾನೂನು ನೆರವು ವ್ಯವಸ್ಥೆಗಳ ಬಗ್ಗೆ ಸರಿಯಾದ ತಿಳುವಳಿಕೆ. ತಂಡಗಳನ್ನು ಮುನ್ನಡೆಸುವ, ವೃತ್ತಿಪರರಿಗೆ ಮಾರ್ಗದರ್ಶನ ನೀಡುವ ಮತ್ತು ಬಹು ಆದ್ಯತೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ತೋರಿಸುವಂತಿರಬೇಕು. ಬಲವಾದ ಪಾಲುದಾರರ ನಿರ್ವಹಣೆ ಮತ್ತು ಸಂಬಂಧ-ನಿರ್ಮಾಣ ಸಾಮರ್ಥ್ಯಗಳು. ಅತ್ಯುತ್ತಮ ಯೋಜನೆ, ವಿಶ್ಲೇಷಣಾತ್ಮಕ, ದಾಖಲಾತಿ ಮತ್ತು ವರದಿ ಮಾಡುವ ಕೌಶಲ್ಯಗಳು. ಮೈಕ್ರೋಸಾಫ್ಟ್ ಆಫೀಸ್ ಮತ್ತು ಗೂಗಲ್ ವರ್ಕ್ ಸ್ಪೇಸ್ ನಲ್ಲಿ ಕೆಲಸ ಮಾಡುವುದು ಗೊತ್ತಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯಾಯ'ವು ಮುಕ್ತ-ಪ್ರವೇಶದ ಡಿಜಿಟಲ್ ಸಂಪನ್ಮೂಲವಾಗಿದ್ದು, ಸರಳ ಹಾಗೂ ಕಾರ್ಯರೂಪಕ್ಕೆ ತರಬಹುದಾದ ಮತ್ತು ವಿಶ್ವಾಸಾರ್ಹವಾದ ಕಾನೂನು ಮಾಹಿತಿಯನ್ನು ವಿವಿಧ ಸ್ವರೂಪಗಳಲ್ಲಿ ಒದಗಿಸುತ್ತದೆ. ಇದು ನಾಗರಿಕರಿಗೆ ತಮ್ಮ ದೈನಂದಿನ ಕಾನೂನು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ಮತ್ತು ನ್ಯಾಯ ಪಡೆಯುವ ನಿಟ್ಟಿನಲ್ಲಿ ಸಬಲರಾಗಲು ಸಹಾಯ ಮಾಡುತ್ತದೆ.