Pathaan 
ಸುದ್ದಿಗಳು

ಕಿವಿ, ದೃಷ್ಟಿದೋಷ ಉಳ್ಳವರು ಪಠಾಣ್‌ ಸಿನಿಮಾ ಆಸ್ವಾದಿಸಲು ಹಿಂದಿ ಉಪಶೀರ್ಷಿಕೆ, ಧ್ವನಿ ವಿವರಣೆಗೆ ಸೂಚಿಸಿದ ನ್ಯಾಯಾಲಯ

ಫೆಬ್ರವರಿ 20ರಂದು ಈ ದಾಖಲೆಗಳನ್ನು ಸಲ್ಲಿಸಲು ಸಿನಿಮಾ ನಿರ್ಮಾಪಕರಿಗೆ ಪೀಠವು ಆದೇಶ ಮಾಡಿದ್ದು, ಮಾರ್ಚ್‌ 10ರೊಳಗೆ ತೀರ್ಮಾನ ಕೈಗೊಳ್ಳುವಂತೆ ಸಿಬಿಎಫ್‌ಸಿಗೆ ನಿರ್ದೇಶಿಸಿದೆ.

Bar & Bench

ದೃಷ್ಟಿದೋಷ ಹೊಂದಿರುವವರು ಸಹ ಪಠಾಣ್‌ ಸಿನಿಮಾವನ್ನು ಒಟಿಟಿ ವೇದಿಕೆಗಳಲ್ಲಿ ಆಸ್ವಾದಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಹಿಂದಿ ಉಪಶೀರ್ಷಿಕೆ ಮತ್ತು ಆಡಿಯೊ ವಿವರಣೆ ಸೇರಿಸಿ ಪುನಾ ಪ್ರಮಾಣ ಪತ್ರ ಪಡೆಯಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಸಲ್ಲಿಸುವಂತೆ ಯಶ್‌ರಾಜ್‌ ಫಿಲ್ಮ್ಸ್‌ ಸಂಸ್ಥೆಗೆ ದೆಹಲಿ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ವಾಕ್‌ ಮತ್ತು ಶ್ರವಣ ದೋಷ ಹೊಂದಿರುವವರು, ವಕೀಲರು ಮತ್ತು ವಕೀಲ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಪಾಟೀಲ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಫೆಬ್ರವರಿ 20ರಂದು ಈ ದಾಖಲೆಗಳನ್ನು ಸಲ್ಲಿಸಲು ಸಿನಿಮಾ ನಿರ್ಮಾಪಕರಿಗೆ ಪೀಠವು ಆದೇಶ ಮಾಡಿದ್ದು, ಮಾರ್ಚ್‌ 10ರೊಳಗೆ ತೀರ್ಮಾನ ಕೈಗೊಳ್ಳುವಂತೆ ಸಿಬಿಎಫ್‌ಸಿಗೆ ನಿರ್ದೇಶಿಸಿದೆ.

ಏಪ್ರಿಲ್‌ನಲ್ಲಿ ಶಾರೂಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಈ ಚಿತ್ರವು ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಸ್ಟ್ರೀಮ್‌ ಆಗಲಿದ್ದು, ಅದರೊಳಗೆ ಅಗತ್ಯ ಬದಲಾವಣೆ ಮಾಡಲು ಪೀಠವು ನಿರ್ಮಾಪಕರಿಗೆ ಆದೇಶ ಮಾಡಿದೆ.

ಪಠಾಣ್‌ ಸಿನಿಮಾ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿನ ಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡಲು ನ್ಯಾಯಾಲಯವು ನಿರಾಕರಿಸಿತು