ಸುದ್ದಿಗಳು

ಶಾಲಾವಧಿ ಬಳಿಕ ಮಕ್ಕಳಿಗೆ ರೂಪದರ್ಶಿ ಕೆಲಸಕ್ಕೆ ಆಮಿಷ: ಕಲ್ಕತ್ತಾ ಹೈಕೋರ್ಟ್ ಗೆ ಪಿಐಎಲ್

Bar & Bench

ಶಾಲೆಗಳ ಹೊರಗೆ ಫ್ಯಾಷನ್ ಶೋಗಾಗಿ ವಿವಾದಾತ್ಮಕ ಪ್ರತಿಭಾನ್ವೇಷಣೆ ನಡೆಯುತ್ತಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಶಾಲಾ ಸಮಯದ ನಂತರ ಮಕ್ಕಳನ್ನು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸುವಂತೆ ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ರೂಪದರ್ಶಿಗಳನ್ನಾಗಿ ಮಾಡುವುದಾಗಿ ಬುರ್ಖಾಧಾರಿ ವ್ಯಕ್ತಿಗಳು ಶಾಲೆ ಬಿಡುವ ಹೊತ್ತಿನಲ್ಲಿ ಮಕ್ಕಳಿಗೆ ಆಮಿಷ ಒಡ್ಡುತ್ತಿರುವ ಸಂಗತಿ ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ಆಧರಿಸಿ ಪಿಐಎಲ್ ದಾಖಲಿಸಲಾಗಿದೆ.

ಬುರ್ಖಾಧಾರಿ ವ್ಯಕ್ತಿಗಳು ಒಳ್ಳೆಯ ಉದ್ದೇಶದಿಂದ ಫ್ಯಾಷನ್ ಶೋಗೆ ಮಕ್ಕಳನ್ನು ಆಹ್ವಾನಿಸುತ್ತಿದ್ದರು ಎಂಬ ಪೊಲೀಸರ ಸಮಜಾಯಿಷಿ ಒಪ್ಪುವಂಥದ್ದಲ್ಲ. ಅಪ್ರಾಪ್ತ ವಯಸ್ಕ ಮಕ್ಕಳನ್ನು ಫ್ಯಾಶನ್ ಶೋಗೆ ಸೇರಿಸಿಕೊಳ್ಳಲು ಯತ್ನಿಸುವುದು ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯಿದೆಯ ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ ಎಂದು ಅರ್ಜಿ ಹೇಳಿದೆ.