Calcutta High Court
Calcutta High Court 
ಸುದ್ದಿಗಳು

ಗಡಿ ಭದ್ರತಾ ಪಡೆ ಅಧಿಕಾರ ವ್ಯಾಪ್ತಿ ನಿರ್ಧರಿಸುವ ಕೇಂದ್ರದ ಅಧಿಕಾರ ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮನವಿ

Bar & Bench

ಕೇಂದ್ರ ಸರ್ಕಾರಕ್ಕೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಪ್ರಾದೇಶಿಕ ವ್ಯಾಪ್ತಿಯನ್ನು ನಿರ್ಧರಿಸುವ ಅನಿರ್ಬಂಧಿತ ಅಧಿಕಾರಗಳನ್ನು ನೀಡುವ ಬಿಎಸ್‌ಎಫ್‌ ಕಾಯಿದೆ 1968ರ ಸೆಕ್ಷನ್‌ 139(1) ಅನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಮನವಿಯೊಂದು ಸಲ್ಲಿಕೆಯಾಗಿದೆ.

ಕೇಂದ್ರ ಗೃಹ ಇಲಾಖೆಯು ಗಡಿ ರಾಜ್ಯಗಳಲ್ಲಿ ಬಿಎಸ್‌ಎಫ್‌ ಪ್ರಾದೇಶಿಕ ವ್ಯಾಪ್ತಿಯನ್ನು 15 ಕಿ.ಮೀನಿಂದ 50 ಕಿ.ಮೀ ಹೆಚ್ಚಿಸಿರುವ ಇತ್ತೀಚೆಗಿನ ನಿರ್ಧಾರವನ್ನು ವಕೀಲ ಸಯನ್‌ ಬ್ಯಾನರ್ಜಿ ಅವರು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

“ಬಿಎಸ್‌ಎಫ್‌ ಮಹಾ ನಿರ್ದೇಶಕರನ್ನು ಪ್ರತಿವಾದಿಯನ್ನಾಗಿಸಿ ಅವರಿಗೆ ಮನವಿ ಕಳುಹಿಸಿಕೊಡುವ ಸಲುವಾಗಿ ಅರ್ಜಿದಾರರು ಪ್ರಕರಣದ ಅಲ್ಪ ಮುಂದೂಡಿಕೆಗೆ ಕೋರಿದ್ದಾರೆ” ಎಂದು ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್‌ ಅವರಿದ್ದ ವಿಭಾಗೀಯ ಪೀಠವು ಆದೇಶದಲ್ಲಿ ತಿಳಿಸಿದ್ದು, ವಿಚಾರಣೆಯನ್ನು ಡಿಸೆಂಬರ್‌ 14ಕ್ಕೆ ಮುಂದೂಡಿದೆ.

ಬಿಎಸ್‌ಎಫ್‌ ವ್ಯಾಪ್ತಿಯನ್ನು ಹೆಚ್ಚಿಸುವ ಅಧಿಸೂಚನೆಯನ್ನು ಅಕ್ಟೋಬರ್‌ 11ರಂದು ಕೇಂದ್ರ ಗೃಹ ಇಲಾಖೆ ಹೊರಡಿಸಿದೆ. ಇದರಿಂದ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ಪರಿಣಾಮ ಉಂಟಾಗಲಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಮನವಿಯಲ್ಲಿ ಹೇಳಲಾಗಿದೆ.