A1
A1
ಸುದ್ದಿಗಳು

ಈ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆ ನೀಡಬೇಡಿ, ಅವು ನಮಗೆ ಇಲ್ಲಿ ಬೇಡ: ಸಿಜೆಐ ರಮಣ [ಚುಟುಕು]

Bar & Bench

ಮೊಹರು ಮಾಡಿದ ಕವರ್‌ಗಳಲ್ಲಿ ಕಕ್ಷಿದಾರರು ನ್ಯಾಯಾಲಯಕ್ಕೆ ವಾದಗಳನ್ನು ಸಲ್ಲಿಸುವ ಅಭ್ಯಾಸಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮ್ಮತಿ ಸೂಚಿಸಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ವಿ ರಮಣ ತಿಳಿಸಿದ್ದಾರೆ. ಪಾಟ್ನಾ ಹೈಕೋರ್ಟ್ ತೀರ್ಪಿನ ವಿರುದ್ಧ ದಿನೇಶ್ ಕುಮಾರ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. "ಮುಚ್ಚಿದ ಲಕೋಟೆಯನ್ನು ಈ ನ್ಯಾಯಾಲಯಕ್ಕೆ ನೀಡಬೇಡಿ:, ಅವು ಇಲ್ಲಿ ನಮಗೆ ಬೇಡ," ಎಂದು ಸಿಜೆಐ ಹೇಳಿದರು.

ಕಕ್ಷಿದಾರರು ಅದರಲ್ಲಿಯೂ ವಿಶೇಷವಾಗಿ ಸರ್ಕಾರದ ವಾದದ ಪ್ರತಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಿದ್ದಕ್ಕೆ ಸುಪ್ರೀಂ ಕೋರ್ಟ್ ಹಿಂದಿನ ಸಿಜೆಐಗಳ ಅವಧಿಯಲ್ಲಿ ಟೀಕೆಗೆ ಒಳಗಾಗಿತ್ತು. ಸೂಕ್ಷ್ಮ ಪ್ರಕರಣಗಳ ಬಗ್ಗೆ ಪ್ರತಿವಾದಿಗಳು ಮತ್ತು ಸಾರ್ವಜನಿಕರನ್ನು ಕತ್ತಲೆಯಲ್ಲಿಡುವ ʼಮುಚ್ಚಿದ ಲಕೋಟೆ ನ್ಯಾಯಶಾಸ್ತ್ರʼದ ಬಗ್ಗೆ ತಜ್ಞರು ಟೀಕೆ ಮಾಡಿದ್ದರು.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.