Narendra Modi, Whatsapp


 
ಸುದ್ದಿಗಳು

ವಾಟ್ಸಾಪ್‌ನಲ್ಲಿ ಹಂದಿ ಮುಖದ ಮೋದಿ ಚಿತ್ರ: ಅಡ್ಮಿನ್ ವಿರುದ್ಧದ ಪ್ರಕರಣ ರದ್ದುಗೊಳಿಸದ ಅಲಾಹಾಬಾದ್ ಹೈಕೋರ್ಟ್ [ಚುಟುಕು]

Bar & Bench

ಪ್ರಧಾನಿ ಮೋದಿ ಅವರನ್ನು ಹಂದಿ ಮುಖದೊಂದಿಗೆ ಬಿಂಬಿಸಿದ್ದಕ್ಕೆ ಸಂಬಂಧಿಸಿದಂತೆ ವಾಟ್ಸಾಪ್‌ ಗುಂಪಿನ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ನಿರಾಕರಿಸಿದೆ. ಆರೋಪಿ ಗುಂಪಿನ ನಿರ್ವಾಹಕ (ಅಡ್ಮಿನ್) ಮತ್ತು ಸಹ- ವಿಸ್ತೃತ ಸದಸ್ಯನಾಗಿರುವುದರಿಂದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ತಾನು ಸಂದೇಶ ಕಳಿಸಿಲ್ಲ ಬದಲಿಗೆ ಗುಂಪಿನ ಅಡ್ಮಿನ್‌ ಮಾತ್ರ ಆಗಿದ್ದೇನೆ ಎಂಬುದು ಅರ್ಜಿದಾರ ಆರೋಪಿಯ ವಾದವಾಗಿತ್ತು. ಇತ್ತೀಚೆಗೆ ಪೊಕ್ಸೊ ಪ್ರಕರಣವೊಂದನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್‌ ʼವಾಟ್ಸಾಪ್‌ ಸದಸ್ಯರ ಪೋಸ್ಟ್‌ಗಳಿಗೆ ವಾಟ್ಸಾಪ್‌ ಗುಂಪಿನ ಅಡ್ಮಿನ್‌ ಹೊಣೆಯಲ್ಲʼ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.