ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ 
ಸುದ್ದಿಗಳು

ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯಿಂದಾಗಿ ಬಲ, ಎಡ, ನಡು ಪಂಥದ ನಡುವಿನ ಧ್ರುವೀಕರಣ ಒಡೆದು ಕಾಣುತ್ತಿದೆ: ಸಿಜೆಐ

Bar & Bench

ಎಡ, ಬಲ ಅಥವಾ ನಡು ಪಂಥೀಯರ ನಡುವೆ ವಿಶ್ವದೆಲ್ಲೆಡೆ ಧ್ರುವೀಕರಣವಾಗಿದ್ದು ಇದಕ್ಕೆ ಭಾರತವೂ ಹೊರತಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶುಕ್ರವಾರ ಅಭಿಪ್ರಾಯಪಟ್ಟರು.

ಸಮುದಾಯ ಸೇವೆ ಮತ್ತು ಸಾಮಾಜಿಕ ಅಭಿವೃದ್ಧಿ ಮೂಲಕ ಮಹಾತ್ಮ ಗಾಂಧಿಯವರ ಮೌಲ್ಯಗಳನ್ನು ಎತ್ತಿಹಿಡಿದ ವ್ಯಕ್ತಿಗಳನ್ನು ಪುರಸ್ಕರಿಸುವ 45ನೇ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಮಾಧ್ಯಮಗಳ ಬೆಳವಣಿಗೆ, ಸಮುದಾಯಗಳ ನಡುವಿನ ಅಸಹಿಷ್ಣುತೆಯ ಪ್ರಜ್ಞೆ ಹಾಗೂ ಯುವ ಪೀಳಿಗೆಯ ಸೀಮಿತ ನೆಲೆಗಟ್ಟಿನ ಆಲೋಚನೆಯಿಂದಾಗಿ ಇಂತಹ ಧೃವೀಕರಣ ಒಡೆದು ಕಾಣುತ್ತಿದೆ ಎಂದು ಅವರು ಹೇಳಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಎಡ, ಬಲ ಅಥವಾ ನಡು ಪಂಥೀಯರ ನಡುವೆ ಜಾಗತಿಕ ಮಟ್ಟದಲ್ಲಿ ಧ್ರುವೀಕರಣ ಏರ್ಪಟ್ಟಿದ್ದು ಇದಕ್ಕೆ ಭಾರತವೂ ಹೊರತಲ್ಲ.

  • ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯಿಂದಾಗಿ ಬಲ, ಎಡ, ನಡು ಪಂಥದ ನಡುವಿನ ಧ್ರುವೀಕರಣ ಒಡೆದು ಕಾಣುತ್ತಿದೆ.

  • ಇಂತಹ ಧ್ರುವೀಕರಣಕ್ಕೆ ಮುಕ್ತ ಮಾರುಕಟ್ಟೆ ಅಥವಾ ತಂತ್ರಜ್ಞಾನದಂತಹ ಅಂಶಗಳ ಪರಿಣಾಮ ಮಾತ್ರವೇ ಅಲ್ಲದೆ ಸಮುದಾಯದ ವಿಶಾಲ ಗುರಿ ಸಾಧಿಸದ ಸಮಾಜದ ವೈಫಲ್ಯ ಕೂಡ ಕಾರಣ.

  • ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಭಾರತ ತನ್ನ ಪ್ರಜಾಪ್ರಭುತ್ವ ಮತ್ತು ಸ್ವಯಂ ಆಡಳಿತ ಉಳಿಸಿಕೊಳ್ಳಲು ಸಾಧ್ಯವಾಗಿದೆ. ದೇಶದ ತರ್ಕಬದ್ಧ ಸಂವಾದ ಸಂಸ್ಕೃತಿಯೇ ಇದಕ್ಕೆ ಕಾರಣ.

  • ಬೇರೆ ದೇಶಗಳಲ್ಲಿ ಹಿಂಸೆ ಅಥವಾ ಬಂದೂಕು ಶಕ್ತಿ ಕಾನೂನು ಆಡಳಿತ ನಡೆಸುತ್ತಿದ್ದರೆ ಸಂವಾದಗಳ ಮೂಲಕ ಭಾರತ ಎಂಥದ್ದೇ ಕಠಿಣ ಪರಿಸ್ಥಿತಿಯಲ್ಲೂ ಬದುಕುಳಿದಿದೆ.

  • ಒಂದು ಸಮಾಜವಾಗಿ, ಜನ ಅನ್ಯಾಯದ ವಿರುದ್ಧ ದೃಢ ಮನಸ್ಸಿನಿಂದ ಕಾರ್ಯನಿರ್ವಹಿಸುವುದು ಸಹ ಮುಖ್ಯವಾಗಿದ್ದು ಅದನ್ನು ಕೇವಲ ಆ ಕ್ಷಣದ ಹಂತವೆಂದು ನೋಡಬಾರದು.

  • ನಾವು ಅನ್ಯಾಯವನ್ನು ಒಂದು ನಿರ್ದಿಷ್ಟ ಸಂಕಲ್ಪದೊಂದಿಗೆ ಎದುರಿಸದಿದ್ದರೆ, ಅದು ನಮ್ಮ ಸಮಾಜಗಳನ್ನು ಆವರಿಸುವ ಮತ್ತು ಬಹುಶಃ ಮುಳುಗಿಸುವ ಗಂಭೀರ ಅಪಾಯ ಇದೆ.