ಸುದ್ದಿಗಳು

ಬ್ರೇಕಿಂಗ್: ನ್ಯಾಯಾಂಗ ನಿಂದನೆ ತೀರ್ಪು ಪ್ರಕಟ; ಭೂಷಣ್‌ಗೆ ರೂ.1 ದಂಡ ಕಟ್ಟಲು ಆದೇಶಿಸಿದ ಸುಪ್ರೀಂ ಕೋರ್ಟ್‌

Bar & Bench

ನ್ಯಾಯಾಂಗದ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಮಾಡಿದ್ದ ಎರಡು ಟ್ವೀಟ್‌ ಗಳನ್ನು ಆಧರಿಸಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದು, ಇಂದು ಭೂಷಣ್ ಅವರಿಗೆ ಶಿಕ್ಷೆಯ ಪ್ರಮಾಣದ ತೀರ್ಪನ್ನು ಪ್ರಕಟಿಸಲಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಮೂರ್ತಿಗಳಾದ ಬಿ ಅರ್ ಗವಾಯಿ ಹಾಗೂ ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನ್ಯಾಯಾಂಗ ನಿಂದನೆ ಪ್ರಕರಣದ ಶಿಕ್ಷೆಯ ತೀರ್ಪು ಪ್ರಕಟಿಸಲಿದೆ.

ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್ ಅವರು ನ್ಯಾಯಾಲಯವು ಭೂಷಣ್ ರಿಗೆ ಎಚ್ಚರಿಕೆ ನೀಡಿ, ಶಿಕ್ಷೆ ವಿಧಿಸುವುದನ್ನು ಕೈಬಿಡಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹಿರಿಯ ನ್ಯಾಯವಾದಿ ರಾಜೀವ್ ಧವನ್‌ ಅವರು, ಸೆರೆವಾಸದ ಶಿಕ್ಷೆ ನೀಡುವ ಮೂಲಕ “ಭೂಷಣ್‌ ಅವರನ್ನು ಹುತಾತ್ಮರನ್ನಾಗಿಸಬಾರದು,” ಎಂದು ಮನವಿ ಮಾಡಿದ್ದರು.

ತೀರ್ಪು ನೀಡಲು ಒಗ್ಗೂಡಿದ ಪೀಠ: ನ್ಯಾ.ಮಿಶ್ರಾ ಅವರು ತೀರ್ಪನ್ನು ಓದುತ್ತಿದ್ದಾರೆ.

ನ್ಯಾ.ಮಿಶ್ರಾ: ನ್ಯಾಯಮೂರ್ತಿಗಳು ಮಾಧ್ಯಮಗಳ ಬಳಿ ಹೋಗಬಾರದು. ಕೋರ್ಟಿನ ಹೊರಗೆ ಅವರು ನೀಡುವ ಪ್ರತಿಕ್ರಿಯೆಗಳನ್ನು ಪರಿಗಣಿಸಲಾಗದು.

ನಿಂದನಾ ಪ್ರಕರರಣದ ದೋಷಿಯ ಕ್ಷಮೆಯಾಚನೆಗೆ ನಾವು ಹಲವು ಅವಕಾಶಗಳನ್ನು ನೀಡಿದೆವು. ಎಜಿ ಕೂಡ ದೋಷಿಯು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ತಿಳಿಸಿದರು.

ನ್ಯಾ.ಮಿಶ್ರಾ: ದೋಷಿ (ಪ್ರಶಾಂತ್ ಭೂಷಣ್‌) ಕೂಡ ಘಟನೆಗಳಿಗೆ ಹೆಚ್ಚು ಪ್ರಚಾರ ನೀಡಿದರು.

ತೀರ್ಪು ನೀಡಿದ ಸುಪ್ರೀಂ ಕೋರ್ಟ್: ಪ್ರಶಾಂತ್‌ ಭೂಷಣ್‌ ಗೆ ರೂ.1 ದಂಡ ದಂಡ ಕಟ್ಟಲು ತಪ್ಪಿದರೆ, ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಮೂರು ವರ್ಷದವರೆಗೆ ವಕೀಲಿಕೆ ಮಾಡುವುದಕ್ಕೆ ನಿಷೇಧ.

ದೋಷಿ ಪ್ರಶಾಂತ್‌ ಭೂಷಣ್‌ ಅವರು ತಮ್ಮ ತಪ್ಪಿಗಾಗಿ ರೂ.1 ದಂಡ ಕಟ್ಟಬೇಕು. ಸೆಪ್ಟೆಂಬರ್‌ 15ರ ಒಳಗೆ ದಂಡ ಕಟ್ಟಲು ವಿಫಲರಾದಲ್ಲಿ, ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬಹುದು ಹಾಗೂ ಮೂರು ವರ್ಷದವರೆಗೆ ವಕೀಲಿಕೆ ಕೈಗೊಳ್ಳುವುದರಿಂದ ನಿಷೇಧ ವಿಧಿಸಬಹುದು.