Vidhana Soudha  
ಸುದ್ದಿಗಳು

ಸಿವಿಲ್‌ ಪ್ರಕ್ರಿಯಾ ಸಂಹಿತೆಗೆ ರಾಷ್ಟ್ರಪತಿ ಅಂಕಿತ; ಇಂದಿನಿಂದ ಕಾಯಿದೆ ಜಾರಿಗೆ

ರಾಜ್ಯ ಸರ್ಕಾರವು ಮಸೂದೆಗೆ ಜು.19ರಂದು ವಿಧಾನಸಭೆಯಲ್ಲಿ ಮತ್ತು ಜು. 20ರಂದು ಪರಿಷತ್‌ನಲ್ಲಿ ಅನುಮೋದನೆ ಪಡೆದುಕೊಂಡಿತ್ತು. ರಾಜ್ಯಪಾಲರು ಈ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದು ಅವರು 2024ರ ಫೆ.18ರಂದು ಅಂಕಿತ ಹಾಕಿದ್ದರು.

Bar & Bench

ದೀರ್ಘಕಾಲದಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ವ್ಯಾಜ್ಯದ ವಿರುದ್ಧ ಹೋರಾಡಲು ಶಕ್ತಿ ಇಲ್ಲದ ವ್ಯಕ್ತಿಗಳನ್ನು ಒಳಗೊಂಡಿರುವ­­ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ರೂಪಿಸಲಾಗಿರುವ ಸಿವಿಲ್‌ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕಕ್ಕೆ 2023ಕ್ಕೆ ರಾಷ್ಟ್ರಪತಿಗಳು ಕಳೆದ ತಿಂಗಳು ಅಂಕಿತಹಾಕಿದ್ದು, ಇಂದಿನಿಂದ ಅದು ಕಾಯಿದೆ ರೂಪದಲ್ಲಿ ಜಾರಿಗೆ ಬಂದಿದೆ.

2023ರ ಜುಲೈ 18ರಂದು ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಜುಲೈ 19ರಂದು ವಿಧಾನಸಭೆಯಲ್ಲಿ ಮತ್ತು ಜುಲೈ 20ರಂದು ವಿಧಾನ ಪರಿಷತ್‌ನಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿತ್ತು. ರಾಜ್ಯಪಾಲರು ಈ ವಿಧೇಯಕವನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದ್ದರು. ರಾಷ್ಟ್ರಪತಿಗಳು 2024ರ ಫೆಬ್ರವರಿ 18ರಂದು ಅದಕ್ಕೆ ಅಂಕಿತ ಹಾಕಿದ್ದರು.

ನ್ಯಾಯಾಲಯಗಳಲ್ಲಿ ದೀರ್ಘಕಾಲಿನ ವ್ಯಾಜ್ಯವನ್ನು ಎದುರಿಸಲು ಸುಸ್ಥಿರ ಸಾಮರ್ಥ್ಯ ಹೊಂದಿರದ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಉಪಬಂಧ ಕಲ್ಪಿಸುವುದು ಯುಕ್ತವಾಗಿರುವುದರಿಂದ ಮತ್ತು ಸಣ್ಣ ಮತ್ತು ದುರ್ಬಲ ರೈತರಾಗಿರುವ ಕಾರಣ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿರುವ ವ್ಯಕ್ತಿಗಳು ಎಂದರೆ ವಾರ್ಷಿಕವಾಗಿ ಎಲ್ಲಾ ಮೂಲಗಳಿಂದ ಆ ವ್ಯಕ್ತಿಗಳ ವರಮಾನವು ಐವರತ್ತು ಸಾವಿರ ರೂಪಾಯಿಗಳನ್ನು ಮೀರಿರದಂಥ ವ್ಯಕ್ತಿಗಳಾದ ಕಾರಣ, ಕಾನೂನು ನ್ಯಾಯಾಲಯಗಳಲ್ಲಿ ದೀರ್ಘಕಾಲಿಕ ವ್ಯಾಜ್ಯವನ್ನು ಎದುರಿಸಲು ಸುಸ್ಥಿರ ಸಾಮರ್ಥ್ಯ ಹೊಂದಿರುವುದಿಲ್ಲ. ಅಂಥ ವ್ಯಕ್ತಿಗಳ ಭದ್ರತೆ ಒದಗಿಸಲು ಸಿವಿಲ್‌ ಪ್ರಕ್ರಿಯಾ ಸಂಹಿತೆ 1908ಕ್ಕೆ (ಕೇಂದ್ರ ಅಧಿನಿಯಮ 5) ಮತ್ತಷ್ಟುತಿದ್ದುಪಡಿ ಮಾಡುವುದು ವಿಹಿತವಾಗಿರುವುದರಿಂದ ಅಂಥ ಪ್ರಕರಣಗಳಿಗೆ ಯುಕ್ತವಾದ ನಿಗದಿತ ಕಾಲಾವಧಿ ಗೊತ್ತುಪಡಿಸುವ ಮೂಲಕ ಶೀಘ್ರ ನ್ಯಾಯದೊಂದಿಗೆ ಕಾರ್ಯಕ್ಷಮತೆ ಮೇಲೆ ವಿಲೇವಾರಿ ಮಾಡತಕ್ಕದ್ದು. ಅಂಥ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಸೂಕ್ತ ಕಾರ್ಯವಿಧಾನ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

CODE OF CIVIL PROCEDURE (KARNATAKA AMEDMENT) BIL.pdf
Preview