Supreme Court  
ಸುದ್ದಿಗಳು

ಪಾಕ್ ಪರ ಪೋಸ್ಟ್‌: ಉಪನ್ಯಾಸಕನಿಗೆ ಸುಪ್ರೀಂ ಜಾಮೀನು; ಅಮಾನತು ಮುಂದುವರಿಕೆ

ಪಾಕ್‌ ಪರವಾದ ವಿಷಯಗಳಷ್ಟೇ ಅಲ್ಲದೆ ಮಹಿಳೆಯರನ್ನು ಹಿಂಬಾಲಿಸಿದ ಮತ್ತು ಆನ್‌ಲೈನ್‌ನಲ್ಲಿ ಅವರ ವಿರುದ್ಧ ಅಶ್ಲೀಲ ವಿಚಾರ ಹಂಚಿಕೊಂಡ ಆರೋಪಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಳೆದ ತಿಂಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

Bar & Bench

ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ಹಾಗೂ ಅಶ್ಲೀಲ ವಸ್ತುವಿಷಯ ಪ್ರಕಟಿಸಿದ ಆರೋಪ ಎದುರಿಸುತ್ತಿದ್ದ ಕಾಲೇಜು ಉಪನ್ಯಾಸಕನೊಬ್ಬನಿಗೆ ಸುಪ್ರೀಂ ಕೋರ್ಟ್‌ ಸೋಮವಾರ ಜಾಮೀನು ನೀಡಿದೆ.

ಸೇವೆಯಿಂದ ಅಮಾನತುಗೊಂಡಿರುವ ಆತನಿಗೆ ತಾನು ನೀಡಿರುವ ಜಾಮೀನು ಆದೇಶವನ್ನು ಉದ್ಯೋಗಕ್ಕೆ ಮರುನೇಮಕ ಮಾಡಿಕೊಳ್ಳಲು ಬಳಸಬಾರದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಆರು ತಿಂಗಳು ಜೈಲಿನಲ್ಲಿದ್ದ ಕಾರಣಕ್ಕೆ ಆತನಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಉದ್ಯೋಗ ಸ್ಥಳದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪ ಹಾಗೂ ಇನ್ನೂ ಎರಡು ಪ್ರಕರಣಗಳಲ್ಲಿ ಆತನ ಹೆಸರು ಕೇಳಿ ಬಂದಿದೆ. ಪ್ರಾಸಿಕ್ಯೂಷನ್‌ 4 ಸಾಕ್ಷಿದಾರರನ್ನು ವಿಚಾರಣೆ ಮಾಡಬೇಕಿದೆ. ವಿಚಾರಣೆ ಪೂರ್ಣಗೊಳ್ಳಲು ಇನ್ನೂ ಕಾಲಾವಕಾಶ ಅಗತ್ಯವಿದೆ. ಅರ್ಜಿದಾರ ಕಳೆದ 6 ತಿಂಗಳಿಂದ ಬಂಧನದಲ್ಲಿದ್ದಾನೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಜಾಮೀನು ಬಾಂಡ್‌ಗಳನ್ನು ಸಲ್ಲಿಸುವ ಷರತ್ತಿನ ಮೇಲೆ ಅವನನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಪ್ರತಿಯೊಂದು ವಿಚಾರಣೆಯ ದಿನ ಆತ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಪೀಠ ವಿವರಿಸಿದೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ, ಅವರು "ನಾವು ಪಾಕಿಸ್ತಾನಿ ನಾಗರಿಕ ಸಹೋದರರೊಂದಿಗೆ ಇದ್ದೇವೆ" ಮತ್ತು "ಭವಿಷ್ಯದಲ್ಲಿಯೂ ನಾವು ಅವರೊಂದಿಗೆ ಇರುತ್ತೇವೆ" ಎಂದು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ . ಪ್ರಾಸಿಕ್ಯೂಷನ್ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದ್ದಾಗ ಈ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಲಾಗಿದೆ.

ಗೋಸಾಯಿಗಾಂವ್ ಕಾಲೇಜಿನ ಉಪನ್ಯಾಸಕರಾಗಿದ್ದ ಆರೋಪಿ ಜೊಯನಲ್ ಅಬೆದಿನ್‌ಗೆ ಜುಲೈನಲ್ಲಿ ಗುವಾಹಟಿ ಹೈಕೋರ್ಟ್‌ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಆತ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ.

ನಾವು ಪಾಕಿಸ್ತಾನಿ ಸಹೋದರರೊಂದಿಗೆ ಇದ್ದು ಮುಂದೆಯೂ ಅವರೊಂದಿಗೆ ಇರಲಿದ್ದೇವೆ ಎಂದು ಆತ ಭಾರತ–ಪಾಕಿಸ್ತಾನ ನಡುವಿನ ಉದ್ವಿಗ್ನತೆ ಸಂದರ್ಭದಲ್ಲಿ ಪೋಸ್ಟ್ ಮಾಡಿದ್ದ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.

ಇದಲ್ಲದೆ ಮಹಿಳೆಯರನ್ನು ಹಿಂಬಾಲಿಸಿದ ಮತ್ತು ಆನ್‌ಲೈನ್‌ನಲ್ಲಿ ಅವರ ವಿರುದ್ಧ ಅಶ್ಲೀಲ ವಿಚಾರ ಹಂಚಿಕೊಂಡ ಆರೋಪಗಳ ಹಿನ್ನೆಲೆಯಲ್ಲಿ ಉಪನ್ಯಾಸಕನ ಸಾಮಾಜಿಕ ಜಾಲತಾಣ ಪೋಸ್ಟ್‌ಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ಇಂದಿನ ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್‌ ಅವರು ವಿಚಾರಣೆಗೆ ಕಾಲಾವಕಾಶ ಅಗತ್ಯ ಇರುವುದರಿಂದರಿಂದ ಉಪನ್ಯಾಸಕನಿಗೆ ಜಾಮೀನು ನೀಡಿ. ಆದರೆ ಆತನ ವಿರುದ್ಧ ಅಶ್ಲೀಲ ವರ್ತನೆಯ ಆರೋಪಗಳಿರುವುದರಿಂದ ಕಾಲೇಜಿನ ಅಮಾನತು ಮುಂದುವರೆಯಬೇಕು ಎಂದಿದ್ದಾರೆ.