Jagannath Temple and Supreme court
Jagannath Temple and Supreme court 
ಸುದ್ದಿಗಳು

ಪುರಿ ಜಗನ್ನಾಥ ದೇವಾಲಯದ ಸುತ್ತಲಿನ ನಿರ್ಮಾಣಕ್ಕೆ ಆಕ್ಷೇಪ: ʼಪ್ರಚಾರ ಹಿತಾಸಕ್ತಿ ದಾವೆʼ ಎಂದು ವಜಾ ಮಾಡಿದ ಸುಪ್ರೀಂ

Bar & Bench

ಪುರಿ ಜಗನ್ನಾಥ ದೇವಾಲಯದ ಸುತ್ತ ನಿರ್ಮಾಣ ಕಾಮಗಾರಿ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಪ್ರಚಾರ ಹಿತಾಸಕ್ತಿ ಮನವಿ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ದೇವಾಲಯದ ಸುತ್ತ ನಿರ್ಮಾಣ ಕಾಮಗಾರಿ ಪ್ರಶ್ನಿಸಿರುವ ಮನವಿಯು ಪ್ರಚಾರ ಹಿತಾಸಕ್ತಿ ಹೊಂದಿದೆ. ನ್ಯಾಯಾಲಯದ ಸಮಯ ಹಾಳು ಮಾಡುವ ಇಂಥ ಮನವಿಗಳನ್ನು ಆರಂಭದಲ್ಲಿಯೇ ಹೊಸಕಿ ಹಾಕಬೇಕು ಎಂದು ನ್ಯಾಯಮೂರ್ತಿ ಬಿಆರ್‌ ಗವಾಯಿ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿತು.

“ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿ ಮನವಿಗಳ ಸಂಖ್ಯೆಯು ಅಣಬೆಗಳ ರೀತಿಯಲ್ಲಿ ಹೆಚ್ಚಾಗುತ್ತಿದೆ. ಇಂಥ ಪಿಐಎಲ್‌ಗಳಿಗೆ ನಮ್ಮ ಸಮ್ಮತಿಯಿಲ್ಲ. ಇದು ನ್ಯಾಯಾಲಯದ ಸಮಯ ಪೋಲು ಮಾಡುವ ಪ್ರಕ್ರಿಯೆಯಾಗಿದ್ದು, ಇಂಥವನ್ನು ಆರಂಭದಲ್ಲೇ ಚಿವುಟಿ ಹಾಕುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಭಕ್ತರಿಗೆ ಮೂಲಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಸೂಕ್ತ ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ನಿರಾಕರಿಸಲಾಗುತ್ತದೆಯೇ? ಇದಕ್ಕೆ ಇಲ್ಲ ಎಂದು ಸ್ಪಷ್ಟವಾಗಿ ಉತ್ತರಿಸಬೇಕಾಗುತ್ತದೆ. ಹಿಂದಿನ ಮೃಣಾಲಿನಿ ಪಧಿ ಪ್ರಕರಣದಲ್ಲಿನ ಆದೇಶಕ್ಕೆ ಪೂರಕವಾಗಿ ಚಟುವಟಿಕೆ ನಡೆಸಲಾಗುತ್ತಿದೆ” ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.