Andhra Pradesh High Court 
ಸುದ್ದಿಗಳು

ಖಾಸಗಿತನದ ಹಕ್ಕುಗಳಿಗೆ ಅನುಗುಣವಾಗಿ ಕಣ್ಗಾವಲು ಕಾನೂನು ರೂಪಿಸಿ: ರಾಜ್ಯ ಸರ್ಕಾರಕ್ಕೆ ಆಂಧ್ರ ಪ್ರದೇಶ ಹೈಕೋರ್ಟ್ ಸೂಚನೆ

ಮೂಲಭೂತ ಹಕ್ಕು ಎಂದು ಘೋಷಿಸಲಾದ ಖಾಸಗಿತನದ ಅಂಶವನ್ನು ಗಮನದಲ್ಲಿಟ್ಟುಕೊಂಡು, ಈ ವಿಷಯದ ಬಗ್ಗೆ ಸರ್ಕಾರ ಸೂಕ್ತ ಕಾನೂನನ್ನು ತುರ್ತಾಗಿ ರೂಪಿಸುತ್ತದೆ ಎಂದು ನ್ಯಾಯಾಲಯ ಭರವಸೆ ವ್ಯಕ್ತಪಡಿಸಿದೆ.

Bar & Bench

ಅಪರಾಧಗಳನ್ನು ತಡೆಗಟ್ಟಲು ಮಾಹಿತಿ ಮತ್ತು ಗುಪ್ತಚರ ವಿವರ ಸಂಗ್ರಹಿಸುವ ಅಗತ್ಯವಿರುವುದರಿಂದ ಕಣ್ಗಾವಲು ವಿಷಯಗಳ ಕುರಿತು ಶಾಸನಬದ್ಧ ನಿಯಮಾವಳಿ ಶೀಘ್ರ ರೂಪಿಸಲು ಆಂಧ್ರ ಸರ್ಕಾರಕ್ಕೆ ಆಂಧ್ರಪ್ರದೇಶ ಹೈರ್ಕೋರ್ಟ್ ಸೂಚಿಸಿದೆ [ಉಡತು ಸುರೇಶ್ ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣ] .

ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಗಿದ್ದು ಅದಕ್ಕೆ ಅನುಗುಣವಾಗಿ ಶಾಸನ ರೂಪಿಸಬೇಕು ಎಂದು ನ್ಯಾಯಮೂರ್ತಿ ಡಿವಿಎಸ್ಎಸ್ ಸೋಮಯಾಜುಲು ಒತ್ತಿ ಹೇಳಿದರು.

ರೌಡಿ ಶೀಟ್‌ ತೆರೆಯಲು ಮತ್ತು ಮುಂದುವರಿಸಲು ಹಾಗೂ ಅದರ ಆಧಾರದಲ್ಲಿ ಕಣ್ಗಾವಲು ಇರಿಸಲು ಆಂಧ್ರ ಪ್ರದೇಶ ಪೊಲೀಸ್‌ ಕೈಪಿಡಿಯಲ್ಲಿರುವ ಸ್ಥಾಯಿ ಆದೇಶಗಳ ಅನುಸರಣೆಯು ಖಾಸಗಿತನದ ಹಕ್ಕನ್ನು ಉಲ್ಲಂಘಿಸುವ ಕಾರಣಕ್ಕಾಗಿ ಅವುಗಳ ವ್ಯಾಪ್ತಿಯನ್ನು ಸೀಮಿತಗೊಳಿಸುವ ಸಂದರ್ಭದಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್‌ ಈ ನಿರ್ದೇಶನ ನೀಡಿತು.

ಖುಲಾಸೆಗೊಂಡ ನಂತರವೂ ರೌಡಿ ಶೀಟ್‌ಗಳನ್ನು ಮುಂದುವರೆಸಲಾಗುತ್ತಿದೆ. ತಮ್ಮನ್ನು ಠಾಣೆಗೆ ಕರೆಸಿ, ಪೊಲೀಸರು ಮನೆಗೆ ಭೇಟಿ ನೀಡಿ ಭಾವಚಿತ್ರ ಪಡೆದುಕೊಂಡು ಯಾವುದೇ ನಿಯಮ ಪಾಲಿಸದೆ ತಮ್ಮನ್ನು ರೌಡಿಗಳೆಂದು ಹೆಸರಿಸಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು.