ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಅಪ್ರಾಪ್ತ ವಯಸ್ಸಿನ ಮಗುವಿನ ವಿರುದ್ಧ ಟ್ವಿಟರ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ ಆರೋಪಿ 23 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ರಾಮನಾಗೇಶ್ ಆಕುಬತಿನಿಗೆ ಮುಂಬೈ ನ್ಯಾಯಾಲಯ ಶನಿವಾರ ಜಾಮೀನು ನೀಡಿದೆ.
ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ರಾಜ್ಯಕ್ಕೆ ಅತ್ಯುತ್ತಮ ಅಂಕಗಳಿಸಿ ಪದವೀಧರನಾಗಿರುವ ಆರೋಪಿ ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ಧ ನಡೆದ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಸೋತ ನಂತರ ಆರೋಪಿ ಕೊಹ್ಲಿ ಮತ್ತು ಅನುಷ್ಕಾ ಅವರ 10 ತಿಂಗಳ ಮಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಪಂದ್ಯ ಸೋತದ್ದಕ್ಕಾಗಿ ಧರ್ಮದ ಆಧಾರದ ಮೇಲೆ ಮತ್ತೊಬ್ಬ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ವಿರುದ್ಧವೂ ಆನ್‌ಲೈನ್ ನಿಂದನೆ ಮಾಡಲಾಗಿತ್ತು. ಆದರೆ ಶಮಿ ಅವರನ್ನು ಕೊಹ್ಲಿ ಸಮರ್ಥಿಸಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
ನವೆಂಬರ್ 8, 2021 ರಂದು ಕೊಹ್ಲಿ ಅವರ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸ್ ಸೈಬರ್ ವಿಭಾಗ ಪ್ರಕರಣ ದಾಖಲಿಸಿಕೊಂಡಿತ್ತು. ಆಕುಬತಿನಿಯನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿತ್ತು.
ಒಂದು ಅಥವಾ ಎರಡು ಶ್ಯೂರಿಟಿಗಳಿರಬೇಕು ಅದರಲ್ಲಿ ಒಬ್ಬರು ಸ್ಥಳೀಯರಾಗಿರಬೇಕು ಎಂಬ ಆಧಾರದಲ್ಲಿ ₹ 50,000 ಮೊತ್ತದ ಬಾಂಡ್ ಸಲ್ಲಿಸಿ ಜಾಮೀನು ಪಡೆಯುವಂತೆ ಶನಿವಾರ, ಬಾಂದ್ರಾದ ಮ್ಯಾಜಿಸ್ಟ್ರೇಟ್ ಅವರು ಆಕುಬತಿನಿಗೆ ಸೂಚಿಸಿದರು. ಆರೋಪಿಯು ವಾರಕ್ಕೆ ಎರಡು ಬಾರಿ ಒಂದು ತಿಂಗಳ ಕಾಲ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಾಜರಾಗಬೇಕು ಮತ್ತು ಶ್ಯೂರಿಟಿಗಳೊಂದಿಗೆ ತನ್ನ ವಾಸದ ವಿವರಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.