ಸುದ್ದಿಗಳು

ಭಾರತೀಯ ದಿವಾಳಿತನ ಮತ್ತು ದಿವಾಳಿ ಮಂಡಳಿಯ ಅಧ್ಯಕ್ಷರಾಗಿ ರವಿ ಮಿತ್ತಲ್‌ ನೇಮಕ

Bar & Bench

ಭಾರತೀಯ ದಿವಾಳಿತನ ಮತ್ತು ದಿವಾಳಿ ಮಂಡಳಿಯ (ಐಬಿಬಿಐ) ಅಧ್ಯಕ್ಷರಾಗಿ ಕ್ರೀಡಾ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದ ರವಿ ಮಿತ್ತಲ್‌ ಅವರ ಹೆಸರನ್ನು ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಅನುಮೋದಿಸಿದೆ.

ಈ ನೇಮಕಾತಿ ಅವಧಿಯು 5 ವರ್ಷಗಳವರೆಗೆ ಅಥವಾ ನಿಯುಕ್ತಿಯಾದವರಿಗೆ 65 ವಯೋಮಾನ ತಲುಪುವವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಇರಲಿದೆ.

ಐಬಿಬಿಐನಲ್ಲಿ ಅಧ್ಯಕ್ಷರ ಹುದ್ದೆಯು ಕಳೆದ ಸೆಪ್ಟೆಂಬರ್ 30ರಿಂದ ಖಾಲಿ ಇತ್ತು. ಮಂಡಳಿಯ ಅಧ್ಯಕ್ಷರಾಗಿ ಡಾ. ಎಂ ಎಸ್‌ ಸಾಹೂ ಐದು ವರ್ಷದ ಅವಧಿ ಪೂರೈಸಿ ನಿವೃತ್ತರಾದ ನಂತರ ಆ ಸ್ಥಾನಕ್ಕೆ ಪ್ರಭಾರಿಯಾಗಿ ನವರಂಗ್‌ ಸೈನಿ ಅವರನ್ನು ನಿಯುಕ್ತಿ ಮಾಡಲಾಗಿತ್ತು.ಸೈನಿ ಅವರು ಐಬಿಬಿಐನ ಪೂರ್ಣಾವಧಿ ಸದಸ್ಯರಾಗಿದ್ದು ಅವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿತ್ತು.