Supreme Court

 
ಸುದ್ದಿಗಳು

ಗೃಹ ಮಾರಾಟಗಾರರು-ಖರೀದಿದಾರರ ನಡುವೆ ಏಕರೂಪದ ಒಪ್ಪಂದಕ್ಕೆ ಕೋರಿಕೆ; ಅಮಿಕಸ್‌ ಕ್ಯೂರಿ ನೇಮಿಸಿದ ಸುಪ್ರೀಂ [ಚುಟುಕು]

Bar & Bench

ಗೃಹ ನಿರ್ಮಾಣಗಾರರು ಮತ್ತು ಖರೀದಿದಾರರ ನಡುವೆ ಏಕರೂಪದ ಒಪ್ಪಂದ ರೂಪಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರದಂದು ನಡೆಸಿದ ಸುಪ್ರೀಂ ಕೋರ್ಟ್‌ ಈ ಕುರಿತು ನ್ಯಾಯಾಲಯಕ್ಕೆ ಸಲಹೆ ನೀಡಲು ಅಡ್ವೊಕೇಟ್‌ ಆನ್‌ ರೆಕಾರ್ಡ್‌ ದೇವಶೀಶ್‌ ಬರುಖಾ ಅವರನ್ನು ನೇಮಿಸಿ ಆದೇಶಿಸಿದೆ [ಅಶ್ವಿನಿ ಕುಮಾರ್‌ ಉಪಾಧ್ಯಾಯ್ ವರ್ಸಸ್‌ ಕೇಂದ್ರ ಸರ್ಕಾರ].

ಗೃಹ ಖರೀದಿದಾರರ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯಿದೆ 2016ರ ಉದ್ದೇಶಕ್ಕೆ ಅನುಗುಣವಾಗಿ ನಿರ್ಮಾಣಗಾರರು ಮತ್ತು ಖರೀದಿದಾರರ ನಡುವೆ ಪಾರದರ್ಶಕವಾದ ಏಕರೂಪದ ಸಾಮಾನ್ಯ ಒಪ್ಪಂದವೊಂದನ್ನು ರೂಪಿಸಬೇಕು ಎಂದು ಅರ್ಜಿದಾರ ಅಶ್ವಿನಿ ಕುಮಾರ್‌ ಉಪಾಧ್ಯಾಯ್‌ ಕೋರಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾ. ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಸೂರ್ಯ ಕಾಂತ್‌ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಹೆಚ್ಚಿನ ಮಾಹಿತಿಗೆ ಬಾರ್‌ ಅಂಡ್ ಬೆಂಚ್‌ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.