NCLAT

 
ಸುದ್ದಿಗಳು

[ಚುಟುಕು] ನ್ಯಾಯಿಕ ಪ್ರಾಧಿಕಾರ ಒಮ್ಮೆ ಅನುಮೋದಿಸಿದ ಪರಿಹಾರ ಯೋಜನೆ ಗೌಪ್ಯವಾಗಿ ಉಳಿಯದು: ಎನ್‌ಸಿಎಲ್‌ಎಟಿ

Bar & Bench

ನ್ಯಾಯಿಕ ಪ್ರಾಧಿಕಾರ (ಎಎ) ಅನುಮೋದಿಸಿದ ನಂತರ ಪರಿಹಾರ ಯೋಜನೆ ಗೌಪ್ಯ ದಾಖಲೆಯಾಗಿ ಇರುವುದಿಲ್ಲ ಎಂದು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ತೀರ್ಪು ನೀಡಿದೆ. ಜೆಟ್‌ ಏರ್‌ವೇಸ್‌ ಮತ್ತು ಅದರ ಕಾರ್ಮಿಕರಿಗೆ ಸಂಬಂಧಪಟ್ಟಿರುವ ಪ್ರಕರಣದ ವಿಚಾರಣೆ ನಡೆಸಿದ ಎನ್‌ಸಿಎಲ್‌ಎಟಿ ಅಧ್ಯಕ್ಷ ನ್ಯಾ. ಅಶೋಕ್‌ ಭೂಷಣ್‌ ಮತ್ತು ಡಾ. ಅಶೋಕ್‌ ಕುಮಾರ್‌ ಮಿಶ್ರಾ ಅವರಿದ್ದ ಪೀಠವು ʼಪರಿಹಾರ ಯೋಜನೆಯು ಗೋಪ್ಯವಲ್ಲವಾದರೂ ಅದರ ನೈಜ ಹಕ್ಕುದಾರರಲ್ಲದವರು, ಆಸಕ್ತರಲ್ಲದವರಿಗೆ ಪರಿಹಾರ ಯೋಜನೆಯ ವಿವರವನ್ನು ಸೂಕ್ತ ಪ್ರಕರಣಗಳಲ್ಲಿ ನಿರಾಕರಿಸಬಹುದು ಎಂದು ಸ್ಪಷ್ಟಪಡಿಸಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.