ಸುದ್ದಿಗಳು

ದತ್ತು ಮಗುವಿನ ಮೂಲ ಹುಡುಕುವ ಹಕ್ಕು ಜೈವಿಕ ಪೋಷಕರ ಖಾಸಗಿತನದ ಹಕ್ಕನ್ನು ಮೀರುವಂತಿಲ್ಲ: ಕಲ್ಕತ್ತಾ ಹೈಕೋರ್ಟ್‌

ತನ್ನನ್ನು ದತ್ತು ನೀಡಿದ್ದ ತನ್ನ ಜೈವಿಕ ತಾಯಿಯ ವಿವರಗಳನ್ನು ಕೋರಿದ್ದ ವ್ಯಕ್ತಿಯ ಮನವಿಯನ್ನು ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ತಿರಸ್ಕರಿಸಿದರು.

Bar & Bench

ತನ್ನ ಮೂಲ ಕಂಡುಕೊಳ್ಳಲು ದತ್ತು ಪಡೆದ ಮಗುವಿಗೆ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಅಧಿಕಾರವಿದ್ದರೂ, ಅದು ಆ ಮಗುವಿನ ಜೈವಿಕ ಪೋಷಕರ, ಅದರಲ್ಲಿಯೂ ಅವಿವಾಹಿತ ತಾಯಿಯ ಖಾಸಗಿತನದ ಹಕ್ಕನ್ನು ಮೀರುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ.

ಅವಿವಾಹಿತ ಮಹಿಳೆಯೊಬ್ಬರಿಂದ 1988ರಲ್ಲಿ ಮಗುವೊಂದನ್ನು ಸ್ವಿ ಸ್ ದಂಪತಿ ದತ್ತು ಪಡೆದಿದ್ದರು. ಈಗ ಪ್ರೌಢ ವಯಸ್ಕರಾಗಿರುವ ದತ್ತು ಪುತ್ರ ತನ್ನ ಜೈವಿಕ ತಾಯಿ ಯಾರೆಂಬುದನ್ನು ಕಂಡುಕೊಳ್ಳಲು ಬಯಸಿದ್ದರು. ಆದರೆ ಜೈವಿಕ ತಾಯಿಯ ವಿವರ ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಆತ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದ ನ್ಯಾಯಾಲಯ "ಒಬ್ಬರು ತಮ್ಮ ಮೂಲವನ್ನು ತಿಳಿದುಕೊಳ್ಳುವ ಹಕ್ಕು, ಅವರು ತಮ್ಮ ಗುರುತನ್ನು ಅರಿಯುವ ಹಾಗೂ ಘನತೆಯಿಂದ ಜೀವಿಸುವ ಹಕ್ಕಿನಲ್ಲಿ ಅಂತರ್ಗತವಾಗಿದೆ. ಆದ್ದರಿಂದ ತಮ್ಮ ಜೈವಿಕ ಪೋಷಕರ ಗುರುತನ್ನು ತಿಳಿಯುವ ಹಕ್ಕು ಸಂವಿಧಾನದ 21ನೇ ವಿಧಿಯಲ್ಲಿ ಪ್ರತಿಪಾದಿಸಿರುವ ಜೀವಿಸುವ ಹಕ್ಕಿನ ಒಂದು ಭಾಗವಾಗಿದೆ" ಎಂದಿತು.

ಕಲ್ಕತ್ತಾ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ

ವಿಧಿ 21 ವಿದೇಶಿಯರಿಗೂ ಅನ್ವಯವಾಗಲಿದ್ದು ಅರ್ಜಿದಾರರು ಭಾರತದಲ್ಲಿ ವಾಸಿಸದಿದ್ದರೂ, ಅವರ ಮೂಲ ಭಾರತದಲ್ಲಿರುವುದರಿಂದ ಅವರಿಗೆ ಜೀವಿಸುವ ಹಕ್ಕು ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿತು.

ಆದರೆ, 2022ರ ದತ್ತು ನಿಯಮಾವಳಿ 47 (6) ದತ್ತು ಪಡೆದ ಮಗುವಿನ ಹಕ್ಕು ಜೈವಿಕ ಪೋಷಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು.   

ಒಬ್ಬರ ಮೂಲ ತಿಳಿದುಕೊಳ್ಳುವ ಹಕ್ಕಿಗೆ ಹೋಲಿಸಿದರೆ ದತ್ತು ನೀಡಿದ ಜೈವಿಕ ಪೋಷಕರ ಹಕ್ಕು ಅಥವಾ ಗೌಪ್ಯತೆ ಮತ್ತು ಅವರ ಗುರುತಿನ ರಕ್ಷಣೆ ಹೆಚ್ಚು ಮೂಲಭೂತವಾಗಿರುತ್ತದೆ. ಏಕೆಂದರೆ ಈ ಹಕ್ಕು ಜೈವಿಕ ಪೋಷಕರ ಉಳಿವನ್ನು ಕಾಪಾಡುತ್ತದೆ.

ಒಬ್ಬರ ಮೂಲ ತಿಳಿದುಕೊಳ್ಳುವ ಹಕ್ಕಿಗೆ ಹೋಲಿಸಿದರೆ ದತ್ತು ನೀಡಿದ ಜೈವಿಕ ಪೋಷಕರ ಹಕ್ಕು ಅಥವಾ ಗೌಪ್ಯತೆ ಮತ್ತು ಅವರ ಗುರುತಿನ ರಕ್ಷಣೆ ಹೆಚ್ಚು ಮೂಲಭೂತವಾಗಿರುತ್ತದೆ. ಏಕೆಂದರೆ ಈ ಹಕ್ಕು ಜೈವಿಕ ಪೋಷಕರ ಉಳಿವನ್ನು ಕಾಪಾಡುತ್ತದೆ ಎಂದು ನ್ಯಾಯಾಲಯ ನುಡಿಯಿತು.

ತೀವ್ರ ಸಾಮಾಜಿಕ ಒತ್ತಡಗಳಿಂದಾಗಿ ಅವಿವಾಹಿತ ತಾಯಿ ತನ್ನ ಮಗುವನ್ನು ದತ್ತು ನೀಡಿದಾಗ ಮೂಲ ಬಹಿರಂಗಪಡಿಸಿರುವುದಿಲ್ಲ. ಮಗುವನ್ನು ದತ್ತು ಸಂಸ್ಥೆಗೆ ಬಿಡುವಂತಹ ಒತ್ತಾಯಕ್ಕೆ ಒಳಗಾಗಿದ್ದ ಜೈವಿಕ ತಾಯಿ ಇಳಿವಯಸ್ಸಿನಲ್ಲಿ ಸಮಾಜದ ಅಥವಾ ತನ್ನ ಮಗುವಿನ ಮೂಲ ಕಂಡುಕೊಳ್ಳುವ ಆಲೋಚನೆ ಸ್ವಾಗತಿಸುತ್ತಾಳೆ ಎಂದು ಭಾವಿಸಲು ಯಾವುದೇ ಕಾರಣವಿಲ್ಲ ಎಂದು ಅದು ಹೇಳಿತು.

ಹೀಗಾಗಿ ತನ್ನನ್ನು ದತ್ತು ಡಿದ ತನ್ನ ಜೈವಿಕ ತಾಯಿಯ ವಿವರಗಳನ್ನು ಕೋರಿದ್ದ ವ್ಯಕ್ತಿಯ ಮನವಿಯನ್ನು ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ತಿರಸ್ಕರಿಸಿದರು.