Uttarakhand High Court

 
ಸುದ್ದಿಗಳು

ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕಿದೆ: ಉತ್ತರಾಖಂಡ ಹೈಕೋರ್ಟ್ [ಚುಟುಕು]

Bar & Bench

1971ರ ವೈದ್ಯಕೀಯ ಗರ್ಭಪಾತ ಕಾಯಿದೆಯ ಷರತ್ತುಗಳಿಗೆ ಒಳಪಟ್ಟು ಅತ್ಯಾಚಾರ ಸಂತ್ರಸ್ತ ಮಹಿಳೆ ಗರ್ಭಪಾತದ ಹಕ್ಕು ಪಡೆದಿದ್ದಾಳೆ ಎಂದು ಉತ್ತರಾಖಂಡ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. ಗರ್ಭಪಾತದಿಂದ ಸಂತ್ರಸ್ತೆಯ ಜೀವಕ್ಕೆ ಭಾರಿ ಅಪಾಯ ಇದೆ ಎಂಬ ವೈದ್ಯಕೀಯ ಮಂಡಳಿಯ ಸಲಹೆ ಹೊರತಾಗಿಯೂ, ನ್ಯಾಯಾಲಯ ʼಗರ್ಭಾವಸ್ಥೆಯಲ್ಲಿ ಮುಂದುವರೆಯುವಂತೆ ಆಕೆಯನ್ನು ಒತ್ತಾಯಿಸುವುದು ಘನತೆಯಿಂದ ಬದುಕುವ ಆಕೆಯ ಹಕ್ಕನ್ನು ನಿರಾಕರಿಸಿದಂತೆʼ ಎಂದು ಅಭಿಪ್ರಾಯಪಟ್ಟಿದೆ. 28 ವಾರಗಳ ಗರ್ಭಧಾರಣೆಗೆ ಅಂತ್ಯ ಹಾಡಲು ಅನುವು ಮಾಡಿಕೊಡುವಂತೆ ಕೋರಿ 16 ವರ್ಷದ ಸಂತ್ರಸ್ತೆಯ ತಂದೆ ಅರ್ಜಿ ಸಲ್ಲಿಸಿದ್ದರು. ಗರ್ಭಾವಸ್ಥೆ ಮುಂದುವರಿದರೆ ಹುಡುಗಿ ಮಾನಸಿಕ ಆಘಾತ ಅನುಭವಿಸುತ್ತಾಳೆ ಎಂಬುದು ಅವರ ವಾದವಾಗಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.