<div class="paragraphs"><p>Ukraine and Supreme Court</p></div>

Ukraine and Supreme Court

 
ಸುದ್ದಿಗಳು

ರಷ್ಯಾ-ಯುಕ್ರೇನ್ ಬಿಕ್ಕಟ್ಟು: ಯುದ್ಧಗ್ರಸ್ತ ದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಸಹಾಯ ಮಾಡಲು ಕೋರಿ ಸುಪ್ರೀಂಗೆ ಅರ್ಜಿ

Bar & Bench

ಯುಕ್ರೇನ್‌- ರಷ್ಯಾ ಸಮರದ ಹಿನ್ನೆಲೆಯಲ್ಲಿ ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ [ವಿಶಾಲ್ ತಿವಾರಿ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].

ಸಮರಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಆಹಾರ, ಔಷಧ ಮತ್ತು ವಸತಿಗೆ ಅಗತ್ಯವಾಗುವಂತಹ ಜೀವನಾವಶ್ಯಕ ಮತ್ತು ತುರ್ತು ಸಾಮಗ್ರಿಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ವಕೀಲ ವಿಶಾಲ್ ತಿವಾರಿ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

"ಯುಕ್ರೇನ್‌ನ ವಾಯುಪ್ರದೇಶವನ್ನು ನಿರ್ಬಂಧಿಸಲಾಗಿದ್ದು ಅಲ್ಲಿಗೆ ಕಳುಹಿಸಲಾದ ಏರ್ ಇಂಡಿಯಾ ವಿಮಾನ ಯಾವುದೇ ಭಾರತೀಯ ನಾಗರಿಕರನ್ನು ಕರೆತರಲಾಗದೆ ಹಿಂತಿರುಗಿದೆ. ಇದರಿಂದಾಗಿ ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದ ಪರಿಸ್ಥಿತಿ ಇನ್ನಷ್ಟು ಹದಗೆಡುವಂತಾಗಿದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತಮ್ಮ ಜೀವ ಮತ್ತು ಸ್ವತ್ತಿಗೆ ಸಂಬಂಧಿಸಿದಂತೆ ಭಾರತೀಯ ವ್ಯಕ್ತಿಗಳು/ ನಾಗರಿಕರು ಬೆದರಿಕೆ ಎದುರಿಸುತ್ತಿದ್ದಾರೆ. ಅನೇಕರು ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ ಎಂದು ತಿಳಿಸಲಾಗಿದೆ.

10 ದಿನಗಳ ಹಿಂದೆ ಯುದ್ಧದ ಪರಿಸ್ಥಿತಿ ಉಂಟಾದಾಗ ಯುಕ್ರೇನ್‌ನಿಂದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ವಿಫಲವಾಗಿದೆ. ಯುದ್ಧದಂತಹ ಸ್ಥಿತಿ ಶೀಘ್ರವೇ ಸಂಭವಿಸಲಿದೆ ಎಂದು ಕೇಂದ್ರಕ್ಕೆ ಚೆನ್ನಾಗಿ ತಿಳಿದಿತ್ತು. ಎಂದು ಆರೋಪಿಸಲಾಗಿದೆ.

ಕುತೂಹಲಕರ ಸಂಗತಿ ಎಂದರೆ ಆನ್‌ಲೈನ್‌ ವಿಧಾನದಲ್ಲಿ ಯುಕ್ರೇನ್‌ನ ವಿವಿಗಳಲ್ಲಿ ಅಧ್ಯಯನ ಮಾಡಿದ ಭಾರತೀಯ ವಿದ್ಯಾರ್ಥಿಗಳ ಎಂಬಿಬಿಎಸ್‌ ಪದವಿಗೆ ಭಾರತದಲ್ಲಿ ಮನ್ನಣೆ ನೀಡಬೇಕು ಎಂದು ಕೂಡ ಕೋರಲಾಗಿದೆ.