ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಸಮೀರ್ ವಾಂಖೆಡೆ
ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಸಮೀರ್ ವಾಂಖೆಡೆ 
ಸುದ್ದಿಗಳು

ಆರ್ಯನ್ ಖಾನ್ ಬಂಧನ: ತನ್ನ ವಿರುದ್ಧ ಇ ಡಿ ಹೂಡಿದ್ದ ಪ್ರಕರಣ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಸಮೀರ್ ವಾಂಖೆಡೆ ಮೊರೆ

Bar & Bench

ಮುಂಬೈನಿಂದ ಗೋವಾಗೆ 2021ರಲ್ಲಿ ಹೊರಟಿದ್ದ ಕಾರ್ಡಿಲಿಯಾ ವಿಲಾಸಿ ಹಡಗು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನ್ನ ವಿರುದ್ಧ ದಾಖಲಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣ ರದ್ದುಗೊಳಿಸುವಂತೆ ಕೋರಿ ಭಾರತೀಯ ಕಂದಾಯ ಸೇವೆ ಅಧಿಕಾರಿ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ತನ್ನ ಮಗ ಆರ್ಯನ್ ಖಾನ್ ಅವರನ್ನು ಸಿಲುಕಿಸದಿರುವುದಕ್ಕೆ ಪ್ರತಿಯಾಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರಿಂದ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ವಾಂಖೆಡೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ಜಾರಿ ನಿರ್ದೇಶನಾಲಯ ಕೂಡ ಅವರ ವಿರುದ್ಧ ಪ್ರಕರಣ ಹೂಡಿತ್ತು.

ಜಾರಿ ನಿರ್ದೇಶನಾಲಯ ದಾಖಲಿಸಿರುವ ಜಾರಿ ಪ್ರಕರಣ ಮಾಹಿತಿ ವರದಿಯನ್ನು (ಇಸಿಐಆರ್) ರದ್ದುಗೊಳಿಸುವಂತೆ ಕೋರಿ ವಾಂಖೆಡೆ ಅವರು ವಕೀಲ ಕರಣ್ ಲಲಿತ್ ಜೈನ್ ಅವರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದು ಅರ್ಜಿಯ ಅಂತಿಮ ವಿಚಾರಣೆ ನಡೆಯುವವರೆಗೆ ತಮ್ಮನ್ನು ಬಂಧಿಸದಂತೆ ಆದೇಶಿಸಬೇಕು ಎಂದು ವಿನಂತಿಸಿದ್ದಾರೆ.

ನ್ಯಾಯಮೂರ್ತಿಗಳಾದ ಪಿ ಡಿ ನಾಯಕ್ ಮತ್ತು ಎನ್ ಆರ್ ಬೋರ್ಕರ್ ಅವರಿದ್ದ ವಿಭಾಗೀಯ ಪೀಠ ಫೆಬ್ರವರಿ 15ರಂದು ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.

(ಎಡದಿಂದ ಬಲಕ್ಕೆ) ನ್ಯಾಯಮೂರ್ತಿಗಳಾದ ಪಿ ಡಿ ನಾಯಕ್ ಮತ್ತು ಎನ್ ಆರ್ ಬೋರ್ಕರ್, ಬಾಂಬೆ ಹೈಕೋರ್ಟ್

ಮುಂಬೈನಿಂದ ಗೋವಾಕ್ಕೆ ಅಕ್ಟೋಬರ್ 2, 2021 ರಂದು ಹೊರಟಿದ್ದ ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ವಶ ಕಾರ್ಯಾಚರಣೆ ನಡೆಸಿದ್ದ ಮುಂಬೈ ಎನ್‌ಸಿಬಿ ಘಟಕ ಶಾರೂಖ್‌ ಪುತ್ರ ಆರ್ಯನ್‌ ವಿರುದ್ಧ ಮಾದಕವಸ್ತು ಪ್ರಕರಣ ದಾಖಲಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆರ್ಯನ್‌ ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿತ್ತು.

ಅಕ್ಟೋಬರ್ 28, 2021 ರಂದು ಆರ್ಯನ್‌ಗೆ ಜಾಮೀನು ದೊರೆತಿತ್ತು. ನಂತರ ಮೇ 27, 2022 ರಂದು ಅವರನ್ನು ಆರೋಪ ಮುಕ್ತಗೊಳಿಸಲಾಗಿತ್ತು.

ಐಪಿಸಿ ಸೆಕ್ಷನ್‌ 120 ಬಿ (ಕ್ರಿಮಿನಲ್ ಪಿತೂರಿ) 388 (ಸುಲಿಗೆ) ಜೊತೆಗೆ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್‌ 7 (ಲಂಚ) 7 ಎ (ಕಾನೂನುಬಾಹಿರ ವಿಧಾನಗಳಿಂದ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರಲು ಅನಗತ್ಯ ಲಾಭ) ಹಾಗೂ

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 388 (ಸುಲಿಗೆ) ಜೊತೆಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 (ಲಂಚ), 7 ಎ (ಕಾನೂನುಬಾಹಿರ ವಿಧಾನಗಳಿಂದ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರಲು ಅನಗತ್ಯ ಲಾಭ) ಮತ್ತು 12 (ಕುಮ್ಮಕ್ಕು) ಅಡಿಯಲ್ಲಿ ಸಿಬಿಐ ವಾಂಖೆಡೆ ವಿರುದ್ಧ ಎಫ್ಐಆರ್ ದಾಖಲಿಸಿತ್ತು.

ಹೈಕೋರ್ಟ್‌ನಲ್ಲಿ ಬಾಕಿ ಇರುವ ಸಿಬಿಐನ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ವಾಂಖೆಡೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಮೇ 2023ರಲ್ಲಿ ಹೈಕೋರ್ಟ್ ಅವರಿಗೆ ಮಧ್ಯಂತರ ರಕ್ಷಣೆ ನೀಡಿತ್ತು.