Supreme Court
Supreme Court 
ಸುದ್ದಿಗಳು

ಇದು ಅತ್ಯಾಚಾರ ಮತ್ತು ಕೊಲೆಗಳಿಗೆ ನ್ಯಾಯಾಲಯ ತಡೆಯಾಜ್ಞೆ ಜಾರಿಗೊಳಿಸಬೇಕು ಎಂದ ಹಾಗಿದೆ: ಸುಪ್ರೀಂ ಕೋರ್ಟ್

Bar & Bench

ಇತ್ತೀಚೆಗೆ ನ್ಯಾಯಾಲಯಗಳ ಮುಂದೆ ನ್ಯಾಯಾಂಗ ನಿಂದನಾ ಅರ್ಜಿಗಳು ಹೆಚ್ಚಾಗುತ್ತಿರುವ ನಡುವೆಯೇ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ಪೀಠದ ಮುಂದೆ ನ್ಯಾಯಾಂಗ ನಿಂದನಾ ಕಾಯಿದೆ ಜಾರಿಗೆ ನಿರ್ದೇಶಿಸುವಂತೆ ಶುಕ್ರವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಿತ್ತು.

ಮನವಿ ಮಾಡಿರುವಂತೆ ಯಾವುದೇ ತೆರನಾದ ಆದೇಶ ಹೊರಡಿಸಲು ಮುಂದಾಗದ ಸಿಜೆ ಬೊಬ್ಡೆ ಅವರು ಮೌಖಿಕವಾಗಿ ಹೇಳಿದರು.

“ಯಾವುದೇ ತೆರನಾದ ಅತ್ಯಾಚಾರ ಮತ್ತು ಕೊಲೆಗಳು ನಡೆಯದಂತೆ ನ್ಯಾಯಾಲಯ ತಡೆಯಾಜ್ಞೆ ವಿಧಿಸಬೇಕು ಎಂದು ನೀವು ಹೇಳಿದಂತಿದೆ. ಯಾವುದೇ ತೆರನಾದ ನ್ಯಾಯಾಂಗ ನಿಂದನೆ ಮಾಡಬಾರದು ಎಂಬುದು ನಮ್ಮ ಒಪ್ಪಂದ. ಆದರೆ, ನಾವು ನೀವು ಬಯಸಿದಂತೆ ಯಾವುದೇ ತೆರನಾದ ಆದೇಶ ಹೊರಡಿಸಲಾಗದು.”
ಸಿಜೆಐ ಎಸ್ ಎ ಬೊಬ್ಡೆ

“ಇದು ಅನವಶ್ಯಕ. ಈಗಾಗಲೇ ಕಾನೂನು ಜಾರಿಯಲ್ಲಿರುವಾಗ ಕಾನೂನು ಪಾಲಿಸುವಂತೆ ನಾವೇಕೆ ಆದೇಶ ಹೊರಡಿಸಬೇಕು? ಜಗತ್ತಿನಾದ್ಯಂತ ಯಾವುದೇ ನ್ಯಾಯಾಲಯವಾಗಲಿ ಕಾನೂನು ಪಾಲಿಸಬೇಕು, ಉಲ್ಲಂಘಿಸಬೇಡಿ ಎಂದು ತನ್ನ ಪ್ರಜೆಗಳಿಗೆ ನಿರ್ದೇಶಿಸುತ್ತದೆಯೇ?” ಎಂದು ನ್ಯಾಯಪೀಠ ಹೇಳಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ನಿರಾಕರಿಸಿದ ನ್ಯಾಯಾಲಯವು ಅಂಥ ಸಂದರ್ಭ ಉದ್ಭವಿಸಿದರೆ ನಿರ್ದಿಷ್ಟ ಹೈಕೋರ್ಟ್ ಸಂಪರ್ಕಿಸುವಂತೆ ಮನವಿದಾರರಿಗೆ ಸೂಚಿಸಿತು.