<div class="paragraphs"><p>Supreme Court</p></div>

Supreme Court

 
ಸುದ್ದಿಗಳು

ನ್ಯಾಯಾಲಯ ಭತ್ಯೆ: ಸಿಜೆಐ ಶಿಫಾರಸ್ಸು ತಿರಸ್ಕರಿಸಿದ ಕೇಂದ್ರದ ವಿರುದ್ಧ ಸುಪ್ರೀಂ ಮೊರೆ ಹೋದ ಸಿಬ್ಬಂದಿ [ಚುಟುಕು]

Bar & Bench

ಸರ್ವೋಚ್ಚ ನ್ಯಾಯಾಲಯದ ಉದ್ಯೋಗಿಗಳಿಗೆ 'ನ್ಯಾಯಾಲಯ ಭತ್ಯೆ'ಯನ್ನು ನೀಡುವಂತೆ ಸುಪ್ರಿಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರು (ಸಿಜೆಐ) ಮಾಡಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ನೌಕರರ ಕಲ್ಯಾಣ ಸಂಘವು ಸಲ್ಲಿಸಿರುವ ಮನವಿಯನ್ನು ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

ಸಿಜೆಐ ಅವರ ಶಿಫಾರಸ್ಸನ್ನು ತಿರಸ್ಕರಿಸಿರುವ ಕೇಂದ್ರ ಕಾನೂನು ಸಚಿವಾಲಯದ ಪತ್ರವು ಸಂವಿಧಾನದ 14 ಮತ್ತು 146ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ನೌಕರರ ಸಂಘವು ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ. ಮನವಿಯನ್ನು ಆಲಿಸಿದ ನ್ಯಾ. ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಸೂರ್ಯಕಾಂತ್‌ ಅವರಿದ್ದ ಪೀಠವು ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಿ ನೋಟಿಸ್‌ ಜಾರಿ ಮಾಡಿತು.

ಹೆಚ್ಚಿನ ವಿವರಗಳಿಗೆ 'ಬಾರ್‌ ಅಂಡ್‌ ಬೆಂಚ್' ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.